alex Certify
ಕನ್ನಡ ದುನಿಯಾ       Mobile App
       

Kannada Duniya

68 ಕೋಟಿ ಆಸ್ತಿಯ ಒಡತಿ ದಕ್ಷಿಣದ ಈ ನಟಿ

ದಕ್ಷಿಣ ಭಾರತದ ಹಾಟ್ ನಟಿಯರಲ್ಲಿ ನಯನತಾರಾ ಕೂಡ ಒಬ್ಬರು. ನವೆಂಬರ್ 18,1984ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನಯನತಾರಾ ಮೂಲತಃ ಕ್ರಿಶ್ಚಿಯನ್. ನಯನತಾರಾ ಮೂಲ ಹೆಸರು ಡಯಾನಾ ಮೇರಿ ಕುರಿಯನ್. ಸದ್ಯ ದಕ್ಷಿಣ ಭಾರತದ ಪ್ರಸಿದ್ಧ ನಟಿಯಾಗಿರುವ ನಯನತಾರಾ ಪ್ರತಿ ಚಿತ್ರಕ್ಕೆ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಸುಮಾರು 68 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ನಟಿ.

ನಯನತಾರಾ ಬಳಿ ದುಬಾರಿ ಕಾರುಗಳಿವೆ. ನಟಿ ಬಿಎಂಡಬ್ಲ್ಯೂ ಎಕ್ಸ್ 5 (76 ಲಕ್ಷ) ಹಾಗೂ ಆಡಿ ಟಿಟಿ ರೋಡ್ಸ್ಟರ್ (60 ಲಕ್ಷ)  ಕಾರುಗಳು ನಯನತಾರಾ ಬಳಿಯಿವೆ. ಇದ್ರ ಜೊತೆಗೆ ಕೊಚ್ಚಿ ಸೇರಿದಂತೆ ಅನೇಕ ಕಡೆ ಐಷಾರಾಮಿ ಮನೆಗಳಿವೆ. ಅನೇಕ ಬ್ರ್ಯಾಂಡ್ ಗಳಿಗೆ ನಯನತಾರಾ ಸಹಿ ಹಾಕಿದ್ದಾರೆ.

ಒಂದು 50 ಸೆಕೆಂಡ್ ಜಾಹೀರಾತಿಗೆ 5 ಕೋಟಿ ರೂಪಾಯಿ ಪಡೆಯುತ್ತಾರೆ ನಟಿ. ಜಾಹೀರಾತಿನ ಶೂಟಿಂಗ್ 2 ದಿನಗಳವರೆಗೆ ನಡೆಯುತ್ತದೆ. ನಯನತಾರಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ನಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...