alex Certify
ಕನ್ನಡ ದುನಿಯಾ       Mobile App
       

Kannada Duniya

ಸೋನು ಧ್ವನಿಯಲ್ಲಿ ಡಿಂಚಕ್ ಪೂಜಾಳ ಹಾಡು

sonu-dinchak-pooja

ಯೂಟ್ಯೂಬ್ ಸ್ಟಾರ್ ಡಿಂಚಕ್ ಪೂಜಾಳ ಅಭಿಮಾನಿಗಳು ಈಗ ನಿರಾಸೆ ಅನುಭವಿಸುತ್ತಿದ್ದಾರೆ. ಕಟ್ಟಪ್ಪ ಸಿಂಗ್ ಎಂಬವರು ಡಿಂಚಕ್ ಪೂಜಾಳ ಹಾಡುಗಳಿಗೆ ಕಾಪಿರೈಟ್ ಕ್ಲೇಮ್ ಮಾಡಿರುವ ಕಾರಣ ಯೂಟ್ಯೂಬ್ ನಲ್ಲಿದ್ದ ಆಕೆಯ ವಿಡಿಯೋಗಳನ್ನು ಡಿಲಿಟ್ ಮಾಡಲಾಗಿದೆ.

ಡಿಂಚಕ್ ಪೂಜಾಳ ಹಾಡಿಗೆ ಈ ಹಿಂದಿನಿಂದಲೂ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಇದು ಆಕೆಯ ಪಾಪ್ಯುಲಾರಿಟಿಗೇನೂ ಭಂಗ ತಂದಿರಲಿಲ್ಲ. ಆಕೆಯ ವಿಡಿಯೋಗಳು ಯೂಟ್ಯೂಬ್ ನಲ್ಲಿ ಡಿಲಿಟ್ ಆಗುತ್ತಿದ್ದಂತೆಯೇ ವಿರೋಧಿಸುತ್ತಿದ್ದವರು ಸದ್ಯ ಡಿಂಚಕ್ ಪೂಜಾಳ ಕಂಠ ಶೋಷಣೆಯಿಂದ ಬಚಾವಾದೆವು ಎಂದು ನಿಟ್ಟುಸಿರುಬಿಟ್ಟಿದ್ದಾರೆ.

ಆದರೆ ಮಹತ್ವದ ಸಂಗತಿಯೆಂದರೆ ಡಿಂಚಕ್ ಪೂಜಾಳ ಅಭಿಮಾನಿ ಬಳಗದಲ್ಲಿ ಕೇವಲ ಶ್ರೀಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳೂ ಇದ್ದಾರೆಂದರೆ ನೀವು ನಂಬಲೇಬೇಕು. ಈ ಪೈಕಿ ಖ್ಯಾತ ಗಾಯಕ ಸೋನು ನಿಗಮ್ ಕೂಡಾ ಒಬ್ಬರು. ಸದ್ಯ ಲಂಡನ್ ನಲ್ಲಿರುವ ಸೋನು ನಿಗಮ್, ಡಿಂಚಕ್ ಪೂಜಾಳ ಅಭಿಮಾನಿಗಳು ಸಂತಸಪಡುವಂತಹ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಡಿಂಚಕ್ ಪೂಜಾಳ ‘ದಿಲೋಂಕಾ ಸ್ಕೂಟರ್’ ಹಾಡನ್ನು ಕುಮಾರ್ ಸಾನು ಶೈಲಿಯಲ್ಲಿ ಹಾಡುವ ಮೂಲಕ ಸೋನು ನಿಗಮ್ ಅಭಿಮಾನಿಗಳನ್ನು ರಂಜಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...