alex Certify
ಕನ್ನಡ ದುನಿಯಾ       Mobile App
       

Kannada Duniya

ರಣಬೀರ್ ಗೆ ಫುಲ್ ಮಾರ್ಕ್ಸ್ ನೀಡಿದ ಆಲಿಯಾ ತಾಯಿ

ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಪ್ರೀತಿಯನ್ನು ಮುಚ್ಚಿಡಲು ಸಾಧ್ಯವಿಲ್ಲ. ರಣಬೀರ್ ಹಾಗೂ ಆಲಿಯಾ ಈಗಾಗಲೇ ಅನೇಕ ಬಾರಿ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ರಣಬೀರ್ ತಂದೆ ರಿಷಿ ಕಪೂರ್ ಹಾಗೂ ಆಲಿಯಾ ತಂದೆ ಮಹೇಶ್ ಭಟ್ ಕೂಡ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಈಗ ಆಲಿಯಾ ತಾಯಿ ಸೋನಿ ಕೂಡ ಮಗಳ ಪ್ರೀತಿಗೆ ಯಸ್ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸೋನಿ, ಭಾವಿ ಅಳಿಯನನ್ನು ಹೊಗಳಿದ್ದಾರೆ. ರಣಬೀರ್ ಒಳ್ಳೆ ಹುಡುಗ. ಆಲಿಯಾ-ರಣಬೀರ್ ಮಧ್ಯೆ ಹೊಂದಾಣಿಕೆ ಚೆನ್ನಾಗಿದೆ. ಇಬ್ಬರು ಎಲ್ಲ ವಿಷ್ಯವನ್ನು ಬಹಿರಂಗವಾಗಿ ಚರ್ಚೆ ಮಾಡ್ತಾರೆಂದು ಸೋನಿ ಹೇಳಿದ್ದಾರೆ.

ರಿಷಿ ಕಪೂರ್, ನೀತು ಸಿಂಗ್ ಕೂಡ ಸೋನಿಗೆ ಪರಿಚಿತರು. ಅವ್ರಿಗೆ ಆಲಿಯಾ ಇಷ್ಟವಾಗಿದ್ದಾರೆ. ರಿಷಿ, ಆಲಿಯಾಳನ್ನು ಸೊಸೆ ಎಂದು ಸ್ವೀಕಾರ ಮಾಡಿಯಾಗಿದೆ. ಆಲಿಯಾ ತಾಯಿಯನ್ನು ತುಂಬಾ ಪ್ರೀತಿ ಮಾಡ್ತಾಳೆ. ತಾಯಿ ಮಾತಿಗೆ ಒಲ್ಲೆ ಎನ್ನುವುದು ಅಪರೂಪ. ಈಗ ತಾಯಿ ಕೂಡ ರಣಬೀರ್ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿರುವುದ್ರಿಂದ ಶೀಘ್ರವೇ ಆಲಿಯಾ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...