alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ಅಭಯ್ – ಸೋನಂ ಜಟಾಪಟಿ

abhay

ಫೇರ್ನೆಸ್ ಕ್ರೀಮ್ ಜಾಹೀರಾತಿನಲ್ಲಿ ಕಾಣಿಸಿಕೊಳ್ತಾ ಇರೋ ಬಾಲಿವುಡ್ ದಿಗ್ಗಜರನ್ನು ಟೀಕಿಸುವ ಮೂಲಕ ನಟ ಅಭಯ್ ಡಿಯೋಲ್ ಭಾರೀ ಸುದ್ದಿ ಮಾಡಿದ್ರು. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ, ಶಾಹಿದ್ ಕಪೂರ್, ಸೋನಂ ಕಪೂರ್, ಇಲಿಯಾನಾ, ಸಿದ್ದಾರ್ಥ್ ಮಲ್ಹೋತ್ರಾ, ವಿದ್ಯಾ ಬಾಲನ್ ಇವರೆಲ್ಲಾ ಫೇರ್ಸೆನ್ ಕ್ರೀಮ್ ಜಾಹೀರಾತಿನಲ್ಲಿ ಜನಾಂಗೀಯ ನಿಂದನೆ ಮಾಡಿದ್ದಾರೆ ಅಂತಾ ಅಭಯ್ ಡಿಯೋಲ್ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ರು.

sonam

ಜಾಹೀರಾತಿನ ಮೂಲಕ ನಟ-ನಟಿಯರು ಯಾವ ರೀತಿ ಜನರ ದಿಕ್ಕು ತಪ್ಪಿಸ್ತಿದ್ದಾರೆ ಅನ್ನೋದನ್ನು ಫೋಟೋ ಸಮೇತ ಪ್ರಕಟಿಸಿದ್ರು. ಇದೀಗ ನಟಿ ಸೋನಂ ಕಪೂರ್ ಅಭಯ್ ಡಿಯೋಲ್ ಗೆ ತಿರುಗೇಟು ನೀಡಿದ್ದಾಳೆ. ಜಾಹೀರಾತಿನ ಮೂಲಕ ಜನಾಂಗೀಯ ನಿಂದನೆ ಮಾಡುತ್ತಿರುವವರ ಪಟ್ಟಿಯಲ್ಲಿ ನಿಮ್ಮ ಸಹೋದರಿ ಕೂಡ ಇದ್ದಾಳೆ ಅಂತಾ ಅಭಯ್ ಡಿಯೋಲ್ ಗೆ ನೆನಪಿಸಿದ್ದಾಳೆ.

ಅಭಯ್ ಡಿಯೋಲ್ ಸಹೋದರಿ ಇಶಾ ಡಿಯೋಲ್ ಕೂಡ ಗಾರ್ನಿಯರ್ ಫೇಸ್ ಕ್ರೀಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಅವಳನ್ಯಾಕೆ ಮರೆತಿದ್ದೀರಾ ಅಂತಾ ಪ್ರಶ್ನಿಸಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಭಯ್, ಇಶಾ ಮಾಡಿರೋದು ಕೂಡ ತಪ್ಪು ಅಂತಾ ಒಪ್ಪಿಕೊಂಡಿದ್ದಾರೆ.

isha

10 ವರ್ಷಗಳ ಹಿಂದೆ ಆ ಜಾಹೀರಾತಿನಲ್ಲಿ ನಟಿಸಿದ್ದೆ, ಅದರಲ್ಲಿರೋ ದ್ವಂದ್ವವನ್ನು ಅರ್ಥಮಾಡಿಸಿದ್ದಕ್ಕೆ ಧನ್ಯವಾದ ಅಂತಾನೂ ಸೋನಂ ಟ್ವೀಟ್ ಮಾಡಿದ್ದರು. ಆದ್ರೆ ನಂತರ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ. ಅಭಯ್ ಮಾಡಿರೋ ಟೀಕೆ ಬಗ್ಗೆ ಉಳಿದ ಯಾವ ನಟ- ನಟಿಯರೂ ಇದುವರೆಗೆ ಪ್ರತಿಕ್ರಿಯಿಸಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...