alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗಿಸುವಂತಿದೆ ಈ ನಟಿಯರು ಧರಿಸಿದ್ದ ರಿಂಗ್ ಬೆಲೆ…!

ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬಂತೆ ನಟಿ ಸೋನಂ ಕಪೂರ್ ತನ್ನ ಬಹು ಕಾಲದ ಗೆಳೆಯ ಆನಂದ್ ಅಹುಜಾ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟು ಮೂರು ದಿನ ಕಳೆದರೂ ವಿವಾಹ ಕುರಿತು ಹೊಸ ಹೊಸ ಸುದ್ದಿಗಳು ಹೊರ ಬೀಳುತ್ತಲೇ ಇವೆ.

ಉದ್ಯಮಿಯಾಗಿರುವ ಆನಂದ್ ಅಹುಜಾ 175 ಕೋಟಿ ರೂ. ಮೌಲ್ಯದ ಬಂಗಲೆಯಲ್ಲಿ ವಾಸವಾಗಿದ್ದಾರೆಂಬ ಸುದ್ದಿ ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಗ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ಆನಂದ್ ಅಹುಜಾ, ಸೋನಂ ಕಪೂರ್ ಗೆ ತೊಡಿಸಿದ್ದ ಉಂಗುರದ ಬೆಲೆ ಬರೋಬ್ಬರಿ 90 ಲಕ್ಷ ರೂಪಾಯಿ ಎನ್ನಲಾಗಿದೆ.

ಹಾಗೆಂದು ಆನಂದ್ ಅಹುಜಾ, ಸೋನಂ ಕಪೂರ್ ಗೆ ತೊಡಿಸಿದ್ದ ಉಂಗುರದ ಬೆಲೆ ಇತರೆ ಬಾಲಿವುಡ್ ನಟಿಯರು ತಮ್ಮ ವಿವಾಹ ಸಂದರ್ಭದಲ್ಲಿ ಧರಿಸಿದ್ದ ಉಂಗುರಕ್ಕೆ ಹೋಲಿಸಿದರೆ ಹೆಚ್ಚೇನೂ ಅಲ್ಲವೆಂದರೆ ನಿಮಗೆ ಅಚ್ಚರಿಯಾಗಬಹುದು.

ಹೌದು, ಕೆಲ ನಟಿಯರು ತಮ್ಮ ವಿವಾಹದ ವೇಳೆ ಧರಿಸಿದ್ದ ಉಂಗುರದ ಬೆಲೆ ದಂಗಾಗಿಸುವಂತಿದೆ. ಹಾಗಾದರೆ ಆ ನಟಿಯರು ಧರಿಸಿದ್ದ ಉಂಗುರದ ಮೌಲ್ಯವೆಷ್ಟು ಅಂತೀರಾ? ಇಲ್ಲಿದೆ ನೋಡಿ ಅದರ ಮಾಹಿತಿ.

ಮೈಕ್ರೋಮ್ಯಾಕ್ಸ್ ಕಂಪನಿಯ ಸಂಸ್ಥಾಪಕ ರಾಹುಲ್ ಶರ್ಮಾ, ‘ಘಜನಿ’ ಖ್ಯಾತಿಯ ನಟಿ ಆಸಿನ್ ಕೈ ಹಿಡಿದ ವೇಳೆ 6 ಕೋಟಿ ರೂ. ಮೌಲ್ಯದ ಉಂಗುರವನ್ನು ತೊಡಿಸಿದ್ದರು.

ಇನ್ನು ನಟಿ ಶಿಲ್ಪಾ ಶೆಟ್ಟಿ, ಉದ್ಯಮಿ ರಾಜ್ ಕುಂದ್ರಾರನ್ನು ವಿವಾಹವಾದ ಸಂದರ್ಭದಲ್ಲಿ ಧರಿಸಿದ್ದ ಉಂಗುರದ ಬೆಲೆ 3 ಕೋಟಿ ರೂಪಾಯಿ.

ಕಳೆದ ವರ್ಷ ಇಟಲಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರ ಕೈ ಹಿಡಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹದ ವೇಳೆ 1 ಕೋಟಿ ರೂಪಾಯಿ ಬೆಲೆಯ ಉಂಗುರ ಧರಿಸಿದ್ದರು.

ಸೈಫ್ ಆಲಿಖಾನ್ ವಿವಾಹವಾಗಿರುವ ಕರೀನಾ ಕಪೂರ್ ವಿವಾಹದ ವೇಳೆ 75 ಲಕ್ಷ ರೂ. ಮೌಲ್ಯದ ಉಂಗುರ ಧರಿಸಿದ್ದರು. 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...