alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವ ಕಳ್ಳ ಸಾಗಾಣಿಕೆ ವಿರುದ್ದ ಧ್ವನಿ ಎತ್ತಿದ ಸೋನಂ

ಬಾಲಿವುಡ್‌ ನಟಿ ಸೋನಮ್‌ ಕಪೂರ್‌, ಮಾನವ ಕಳ್ಳ ಸಾಗಾಣಿಕೆ ಬಗ್ಗೆ ತಮ್ಮ ಧ್ವನಿ ಎತ್ತಿದ್ದಾರೆ. ಪತಿಯ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟಿ, ಟ್ವಿಟರ್‌ ಖಾತೆಯಲ್ಲಿ ಮಕ್ಕಳ ಅಪಹರಣ, ಕಳ್ಳಸಾಗಾಣಿಕೆ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಮಾನವ ಕಳ್ಳಸಾಗಾಣಿಕೆ ಕೇವಲ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಮಾತ್ರ ಅಲ್ಲ. ವ್ಯಕ್ತಿಯ ಗೌರವಕ್ಕೂ ಧಕ್ಕೆ ತರುವಂತಹುದು. ಇದರಿಂದ ತೊಂದರೆಗೆ ಸಿಲುಕುತ್ತಿರುವವರ ಪೈಕಿ ಶೇ.20 ರಷ್ಟು ಜನ ಮಕ್ಕಳು. ಇದು ಇನ್ನಷ್ಟು ಬೇಸರದ ವಿಚಾರ. ಪ್ರತಿಯೊಬ್ಬರೂ ಇಂತಹ ಕೃತ್ಯದ ವಿರುದ್ಧ ಧ್ವನಿ ಎತ್ತಬೇಕು. ಸುರಕ್ಷಿತ ವಾತಾವರಣ ನಿರ್ಮಾಣದತ್ತ ಕೈ ಜೋಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ನೀರಜಾ ಸಿನಿಮಾ ಬಳಿಕ, ತಮ್ಮನ್ನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಸೋನಮ್‌, ಸಮಾಜಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ.

ಜೊತೆಗೆ ಶೆಲ್ಲಿ ಚೋಪ್ರಾ ಅವರ ‘ಏಕ್‌ ಲಡ್‌ಕಿ ದೇಖಾ ತೊ ಐಸಾ ಲಗಾ’ ಸಿನಿಮಾದಲ್ಲಿ ಸೋನಮ್‌ ಕಪೂರ್‌ ತಮ್ಮ ತಂದೆ ಅನಿಲ್‌ ಕಪೂರ್‌ ಅವರೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜೂಹಿ ಚಾವ್ಲಾ ಹಾಗೂ ರಾಜ್‌ಕುಮಾರ್ ರಾವ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...