alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ನಲ್ಲಿರುವ ಸೋನಂ ಹೇಳಿದ್ಲು ಆಶ್ಚರ್ಯಕಾರಿ ಸಂಗತಿ

ಬಾಲಿವುಡ್ ನಟಿ ಸೋನಂ ಕಪೂರ್ ಹನಿಮೂನ್ ಮೂಡಿನಲ್ಲಿದ್ದಾಳೆ. ಆನಂದ್ ಅಹುಜಾ ಜೊತೆ ಲಂಡನ್ ನಲ್ಲಿ ಎಂಜಾಯ್ ಮಾಡ್ತಿದ್ದಾಳೆ. ಆನಂದ್ ಜೊತೆಗಿದ್ದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ಆನಂದ್ ಬಗ್ಗೆ ಆಶ್ಚರ್ಯಕಾರಿ ಸಂಗತಿಯನ್ನು ಸೋನಂ ಹೇಳಿದ್ದಾಳೆ.

ಡೆಕ್ಕನ್ ಕ್ರೋನಿಕಲ್ ಜೊತೆ ಮಾತನಾಡಿದ ಸೋನಂ, ನನ್ನ ಜೀವನದಲ್ಲಿ ಆನಂದ್ ಪ್ರಮುಖ ವ್ಯಕ್ತಿ. ಅವ್ರ ಕುಟುಂಬದ ಜೊತೆಯೂ ನನ್ನ ಸಂಬಂಧ ಚೆನ್ನಾಗಿದೆ ಎಂದಿದ್ದಾಳೆ. ಆನಂದ್ ನನ್ನು ಪತಿಗಿಂತ ಬಾಯ್ ಫ್ರೆಂಡ್ ರೀತಿಯಲ್ಲಿ ನೋಡ್ತಾಳೆ ಸೋನಂ. ಆನಂದ್ ಈಗ್ಲೂ ನನ್ನ ಸ್ನೇಹಿತ. ಹಾಗಾಗಿ ಮದುವೆ ನಂತ್ರವೂ ಆನಂದ್ ರನ್ನು ಬಾಯ್ ಫ್ರೆಂಡ್ ರೀತಿಯಲ್ಲಿ ನೋಡ್ತೇನೆ ಎಂದಿದ್ದಾಳೆ.

ಇಬ್ಬರೂ ಪರಸ್ಪರ ವೃತ್ತಿಗೆ ಗೌರವ ನೀಡ್ತೆವೆ. ಹಾಗಾಗಿ ಸಂಬಂಧದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ಸೋನಂ ಹೇಳಿದ್ದಾಳೆ. ಸೋನಂ, ಆನಂದ್ ಜೊತೆ ಕರೀನಾ, ಸೈಫ್ ಕೂಡ ಲಂಡನ್ ನಲ್ಲಿದ್ದಾರೆ. ಮಗನ ಜೊತೆ ಮಕ್ಕಳಾಗಿ ಆಟವಾಡ್ತಿದ್ದ ಫೋಟೋ ವೈರಲ್ ಆಗಿದೆ. ಇನ್ನು ಅರ್ಜುನ್ ಕಪೂರ್ ಕೂಡ ಲಂಡನ್ ನಲ್ಲಿ ಶೂಟಿಂಗ್ ಮಾಡ್ತಿದ್ದು ಸೋನಂ, ಕರೀನಾ, ಅರ್ಜುನ್ ಜೊತೆಗಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...