alex Certify
ಕನ್ನಡ ದುನಿಯಾ       Mobile App
       

Kannada Duniya

ವಧುವಾದ ಸೋನಂ ಕಪೂರ್: ಮೊದಲ ಫೋಟೋ ವೈರಲ್

ಬಾಲಿವುಡ್ ನಟಿ ಸೋನಂ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಮೇ 8 ರಂದು ಮಂಗಳವಾರ ಚಿಕ್ಕಮ್ಮನ ಮನೆಯಲ್ಲಿ ಸೋನಂ ಕಪೂರ್, ಆನಂದ್ ಅಹುಜಾ ಕೈ ಹಿಡಿದಿದ್ದಾಳೆ. ಸೋನಂ ಕಪೂರ್ ವಧುವಿನ ರೂಪದಲ್ಲಿದ್ದ ಮೊದಲ ಫೋಟೋ ವೈರಲ್ ಆಗಿದೆ.

ಫ್ಯಾಷನ್ ದೀವಾ ಸೋನಂ ಕಪೂರ್ ವಧುವಿನ ಅಲಂಕಾರದಲ್ಲಿ ತುಂಬಾ ಸುಂದರವಾಗಿ ಕಾಣ್ತಿದ್ದಾಳೆ. ಕೆಂಪು ಹಾಗೂ ಬಂಗಾರದ ಬಾರ್ಡರ್ ಇರುವ ಲೆಹಂಗಾ ಧರಿಸಿರುವ ಸೋನಂ ನೋಡಲು ಎರಡು ಕಣ್ಣು ಸಾಲದು. ನೆಕ್ಲೇಸ್ ಹಾಗೂ ಬಂಗಾರದ ಹಾರ ಸೋನಂ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಇದೇ ವೇಳೆ ಆನಂದ್ ಅಹುಜಾ ಫೋಟೋ ಕೂಡ ವೈರಲ್ ಆಗಿದೆ. ಕಪ್ಪು ಬಣ್ಣದ ನೆಹರೂ ಕಾಲರ್ ಶೇರ್ವಾನಿಯಲ್ಲಿ ಆನಂದ್ ಅಹುಜಾ ಮಿಂಚಿದ್ದಾರೆ. ಸೋನಂ, ಆನಂದ್ ಒಂದೇ ಅಲ್ಲ ಸೋನಂ ತಂದೆ ನಟ ಅನಿಲ್ ಕಪೂರ್ ಯುವಕರನ್ನು ನಾಚಿಸುವಂತೆ ಸಿದ್ಧವಾಗಿದ್ದಾರೆ. ಕುರ್ತಾ, ಪೈಜಾಮ್ ನಲ್ಲಿ ಅನಿಲ್ ಕಪೂರ್ ಮಗಳ ಮದುವೆಗೆ ಸಿದ್ಧವಾಗಿದ್ದರು.

ಸೋಮವಾರ ಮೆಹಂದಿ, ಸಂಗೀತ ಕಾರ್ಯಕ್ರಮ ನಡೆದಿತ್ತು. ಇಂದು ಮದುವೆ ನೆರವೇರಿದೆ. ರಾತ್ರಿ ಸ್ಟಾರ್ ಗಳಿಗಾಗಿ ವಿಶೇಷ ಪಾರ್ಟಿ ಏರ್ಪಡಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...