alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯಮಿ ಜೊತೆ ಸೋನಂ ಕಪೂರ್ ಡೇಟಿಂಗ್….

SONAM BOYFRNDಬಿ ಟೌನ್ ನ ಫ್ಯಾಷನ್ ಕ್ವೀನ್ ಅಂತಾನೇ ಫೇಮಸ್ ಆಗಿರೋ ಸೋನಂ ಕಪೂರ್, ‘ನೀರಜಾ’ ಚಿತ್ರದ ಮೂಲಕ ತಮ್ಮ ಅಭಿನಯ ಸಾಮರ್ಥ್ಯವನ್ನು ಕೂಡ ಸಾಬೀತು ಮಾಡಿದ್ದಾಳೆ. ಸೋನಂ ಆ್ಯಕ್ಟಿಂಗ್ ಅಷ್ಟಕ್ಕಷ್ಟೆ ಎನ್ನುತ್ತಿದ್ದವರೆಲ್ಲ, ‘ನೀರಜಾ’ ನೋಡಿ ಫಿದಾ ಆಗಿದ್ದಾರೆ.

ಅಸಲಿಗೆ ವಿಷ್ಯ ಅದಲ್ಲ, ಸೋನಂಗೂ ಒಬ್ಬ ಬಾಯ್ ಫ್ರೆಂಡ್ ಇದ್ದಾನೆ ಅನ್ನೋದೇ ಹಾಟ್ ನ್ಯೂಸ್. ಇಷ್ಟು ದಿನ ಸೋನಂ ಹೆಸರು ಯಾರ ಜೊತೆಗೂ ಥಳುಕು ಹಾಕಿಕೊಂಡಿರ್ಲಿಲ್ಲ. ಆದ್ರೀಗ ಅನಿಲ್ ಕಪೂರ್ ಪುತ್ರಿ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆ ಕುಚ್ ಕುಚ್ ನಡೆಸಿದ್ದಾಳಂತೆ.

ಕಳೆದ 2 ವರ್ಷಗಳಿಂದ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಡೇಟಿಂಗ್ ನಡೆಸ್ತಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ. ಆದ್ರೆ ಈ ವಿಚಾರ ಯಾರಿಗೂ ಗೊತ್ತಾಗದಂತೆ ಸೋನಂ ಜಾಗೃತೆ ವಹಿಸಿದ್ಲು. ಇವರಿಬ್ಬರ ಪ್ರೀತಿ ತುಂಬಾನೇ ಮುಂದುವರಿದಿದ್ದು, ಎರಡೂ ಕುಟುಂಬದವರ ಸಮ್ಮತಿಯೂ ಸಿಕ್ಕಿದೆ ಎನ್ನಲಾಗ್ತಿದೆ. ಹಾಲಿವುಡ್ ನ ವಿಲ್ ಸ್ಮಿತ್ ಗಾಗಿ ಅಕ್ಷಯ್ ಕುಮಾರ್ ಮೊನ್ನೆಯಷ್ಟೆ ಪಾರ್ಟಿ ಏರ್ಪಡಿಸಿದ್ರು. ಆ ಪಾರ್ಟಿಯಲ್ಲಿ ಸೋನಂ ಕಪೂರ್ ತನ್ನ ಪ್ರಿಯಕರ ಆನಂದ್ ಅಹುಜಾ ಜೊತೆ ಕಾಣಿಸಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...