alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದದಲ್ಲಿ ಸೋನಂ-ಆನಂದ್ ವಿವಾಹ…!

ನಟಿ ಸೋನಂ ಕಪೂರ್, ಆನಂದ್ ಅಹುಜಾ ಮದುವೆಯಾಗಿ ವಾರ ಕಳೆಯುತ್ತಾ ಬಂತು. ಆದ್ರೆ ಅವರ ಮದುವೆ ಸುದ್ದಿಗಳು ಇನ್ನೂ ಮುಗಿಯುತ್ತಿಲ್ಲ. ಸದ್ಯ ಈ ಜೋಡಿಯ ವಿವಾಹ ಇದೀಗ ವಿವಾದಕ್ಕೆ ಕಾರಣವಾಗಿದೆ. ವಿವಾಹ ಸಂದರ್ಭದಲ್ಲಿ ಸಿಖ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಲಾಗಿದೆ.

ಸೋನಂ-ಆನಂದ್ ಮದುವೆಯಲ್ಲಿ ಅಮೃತಸರದ ಸ್ವರ್ಣ ಮಂದಿರದಿಂದ ಸಿಖ್ ರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ತರಿಸಲಾಗಿತ್ತು. ಆನಂದ್ ಮತ್ತು ಸೋನಂಳನ್ನು ಆಶೀರ್ವದಿಸಲು ಸ್ವರ್ಣ ಮಂದಿರದ ಧರ್ಮಗುರು ಜಸ್ವಿಂದರ್ ಸಿಂಗ್ ಪವಿತ್ರ ಗ್ರಂಥದ ಹಿಂದೆ ಇದ್ರು. ಆದ್ರೆ ಪವಿತ್ರ ಗ್ರಂಥಕ್ಕೆ ನಮಸ್ಕರಿಸುವಾಗ, ಆನಂದ್ ತಮ್ಮ ಪೇಟಾದಲ್ಲಿದ್ದ ಕಲ್ಗಿಯನ್ನು (ಗರಿಗಳು) ತೆಗೆಯದೆ ಹಾಗೆ ನಮಸ್ಕರಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಶಿರೋಮಣಿ ಗುರುದ್ವಾರ್ ಪ್ರಬಂಧಕ್ ಸಮಿತಿ ಮಾಜಿ ಕಾರ್ಯದರ್ಶಿ ಆಕ್ರೋಶ ವ್ಯಕ್ತಪಡಿಸಿದ್ದು, ಅಲ್ಲಿಯೇ ನಿಂತಿದ್ದ ಎಸ್ ಜಿ ಪಿ ಸಿ ಸದಸ್ಯರು ಇದನ್ನು ನೋಡಿಯೂ ನೋಡದಂತಿದ್ದಾರೆ ಅಂತಾ ಹರಿಹಾಯ್ದಿದ್ದಾರೆ. ಸಿಖ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಸೋನಂ-ಆನಂದ್ ಮದುವೆ ಕಾರ್ಯಕ್ರಮದಲ್ಲಿ ಹಾಜರಿದ್ದ ಶಿರೋಮಣಿ ಗುರುದ್ವಾರ್ ಪ್ರಬಂಧಕ್ ಸಮಿತಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...