alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೆ ಶುರುವಾಯ್ತು ಆನಂದ್-ಸೋನಂ ಲವ್ ಸ್ಟೋರಿ

ನಟಿ ಸೋನಂ ಕಪೂರ್ ಹಾಗೂ ದೆಹಲಿಯ ಬೆಸ್ಟ್ ಬ್ಯುಸಿನೆಸ್ ಮೆನ್ ಆನಂದ್ ಅಹುಜಾ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಸದ್ಯ ಸೋನಂ ಮದುವೆಯದ್ದೇ ಮಾತುಗಳು ಕೇಳಿ ಬರ್ತಿವೆ. ಮೇ 8 ರಂದು ನಡೆಯುವ ಮದುವೆಗೆ ಎಲ್ಲ ಸಿದ್ಧತೆ ಜೋರಾಗಿ ನಡೆಯುತ್ತಿದೆ.

ಸೋನಂ ಹಾಗೂ ಆನಂದ್ ಅಹುಜಾರದ್ದು ಲವ್ ಮ್ಯಾರೇಜ್. ಅನೇಕ ವರ್ಷಗಳಿಂದ ಪ್ರೀತಿ ಹಕ್ಕಿಗಳಾಗಿದ್ದವರು ಈಗ ಮದುವೆ ಬಂಧನಕ್ಕೊಳಗಾಗ್ತಿದ್ದಾರೆ. ಆನಂದ್ ಹಾಗೂ ಸೋನಂ ಮೊದಲ ಭೇಟಿ ಬ್ಯುಸಿನೆಸ್ ಫ್ರೆಂಡ್ ಮೂಲಕವಾಗಿತ್ತು. ಸೋನಂ ಹಾಗೂ ಆನಂದ್ ಇಬ್ಬರಿಗೂ ಫ್ರೆಂಡ್ ಆಗಿದ್ದವರೊಬ್ಬರು ಇಬ್ಬರ ಭೇಟಿ ಮಾಡಿಸಿದ್ದರು. 2014ರಲ್ಲಿ ಇಬ್ಬರು ಮೊದಲ ಭಾರಿ ಪರಿಚಿತರಾಗಿದ್ದರು.

ಸೋನಂ ಸ್ನೇಹಿತೆಯಾಗಿ ಒಂದು ತಿಂಗಳಲ್ಲೇ ಆನಂದ್ ಪ್ರೇಮ ನಿವೇದನೆ ಮಾಡಿದ್ದರು ಎನ್ನಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಪ್ರೇಮಿಗಳಾಗಿದ್ದವರು ಈಗ ದಂಪತಿಯಾಗ್ತಿದ್ದಾರೆ. ಆನಂದ್ ಹಾಗೂ ಸೋನಂ ಮದುವೆಗೆ ಎರಡೂ ಕುಟುಂಬದವರು ಒಪ್ಪಿಗೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಾಧ್ಯಮಕ್ಕೆ ಎರಡೂ ಕುಟುಂಬದವರು ಮದುವೆ ಸುದ್ದಿ ತಿಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...