alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಸೆಸ್ ಅಹುಜಾ ಆದ ಸೋನಂ…!

ಸೋನಂ ಕಪೂರ್ ಕುತ್ತಿಗೆಗೆ ಕರಿಮಣಿ ಬಿದ್ದಿದೆ. ಇಂದಿನಿಂದ ಸೋನಂ ಕಪೂರ್, ಮಿಸೆಸ್ ಅಹುಜಾ ಆಗಿದ್ದಾರೆ. ಸಿಖ್ ಸಂಪ್ರದಾಯದಂತೆ ಈ ಜೋಡಿ ಇಂದು ಮದುವೆಯಾಯ್ತು. ಕೆಂಪು ಬಣ್ಣದ ಲೆಹಂಗಾದಲ್ಲಿ ಸೋನಂ ಸಖತ್ತಾಗಿ ಕಾಣ್ತಿದ್ರೆ, ಗೋಲ್ಡನ್ ಕಲರ್ ಶೆರ್ವಾನಿಯಲ್ಲಿ ಆನಂದ್ ಮಿಂಚುತ್ತಿದ್ರು.

ಇವರಿಬ್ಬರ ವಿವಾಹಕ್ಕೆ ಕಪೂರ್ ಮತ್ತು ಅಹುಜಾ ಕುಟುಂಬಸ್ಥರು, ಹತ್ತಿರದ ಸಂಬಂಧಿಕರು ಮತ್ತು ಬಾಲಿವುಡ್ ನಟರಾದ ಬಿಗ್ ಬಿ ಅಮಿತಾಬ್, ಅಮೀರ್ ಖಾನ್, ಕರೀನಾ, ಕರೀಷ್ಮಾ ಕಪೂರ್, ಸೈಫ್ ಅಲಿಖಾನ್, ಜಾಕ್ವೇಲಿನ್, ಬೋನಿ ಕಪೂರ್, ಜಾಹ್ನವಿ, ಖುಷಿ ಕಪೂರ್ ಸೇರಿದಂತೆ ಕೆಲ ಹತ್ತಿರದ ಸ್ನೇಹಿತರು ಮಾತ್ರ ಭಾಗವಹಿಸಿ, ವಧು-ವರರನ್ನು ಹರಸಿದರು.

ಮದುವೆಯ ನಂತರ ಇಂದು ರಾತ್ರಿಯೇ ಸೋನಂ-ಆನಂದ್ ಅವರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದಾದ ಬಳಿಕ ಸೋನಂ ಕ್ಯಾನೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಫ್ರಾನ್ಸ್ ಗೆ ತೆರಳಲಿದ್ದಾರೆ.

ಅಲ್ಲಿಂದ ಬಂದ ತಕ್ಷಣವೇ ಸೋನಂ, ಜೂನ್ 1 ರಂದು ರಿಲೀಸ್ ಆಗ್ತಿರುವ ತಮ್ಮ ಚಿತ್ರ ‘ವೀರೇ ದಿ ವೆಡ್ಡಿಂಗ್’ ಪ್ರಮೋಷನ್ ನಲ್ಲಿ ಬ್ಯುಸಿಯಾಗಲಿದ್ದಾರೆ. ಹೀಗಾಗಿ ಸೋನಂ ಮತ್ತು ಆನಂದ್ ಹನಿಮೂನ್ ತಡವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...