alex Certify
ಕನ್ನಡ ದುನಿಯಾ       Mobile App
       

Kannada Duniya

ಆನಂದ್ ಕೈಗೆ ಬಂತು ಪತ್ನಿ ಸೋನಂ ದುಪಟ್ಟಾ…!

ಮದುವೆಯಾದ್ಮೇಲೆ ಪತ್ನಿಯ ಬ್ಯಾಗ್ ಪತಿ ಕೈಗೆ ಬರುತ್ತೆ. ಪತ್ನಿ ಕೆಲಸಕ್ಕೆ ಪತಿ ನೆರವಾಗ್ತಾನೆ. ಇಬ್ಬರ ಮಧ್ಯೆ ಪ್ರೀತಿ ಗಟ್ಟಿಯಾಗಬೇಕೆಂದ್ರೆ ಪರಸ್ಪರ ಸಹಾಯ, ಸಹಕಾರ ಅತ್ಯಗತ್ಯ. ಇದನ್ನು ಬಾಲಿವುಡ್ ನಟಿ ಸೋನಂ ಕಪೂರ್ ಪತಿ ಆನಂದ್ ಅಹುಜಾ ನೋಡಿ ಕಲಿಬೇಕು.

ಸೋನಂ ಹಾಗೂ ಆನಂದ್ ಜೋಡಿ ಅಭಿಮಾನಿಗಳ ಅಚ್ಚುಮೆಚ್ಚು. ಫ್ಯಾಷನ್ ಮೂಲಕ ಸೋನಂ ಅಭಿಮಾನಿಗಳ ಮನಸ್ಸು ಕದ್ರೆ ಆನಂದ್ ಸರಳತೆ ಮೂಲಕ ಅಭಿಮಾನಿಗಳಿಗೆ ಇಷ್ಟವಾಗ್ತಾರೆ. ದೆಹಲಿಯಲ್ಲಿ ನಡೆದ ಫ್ಯಾಷನ್ ಶೋ ಕಾರ್ಯಕ್ರಮವೊಂದರಲ್ಲಿ ಆನಂದ್ ಸರಳತೆ ಎಲ್ಲರ ಗಮನ ಸೆಳೆದಿದೆ.

ಸೋನಂ ಫ್ಯಾಷನ್ ಶೋಗಾಗಿ ಚೆಂದದ ದೊಡ್ಡ ಲೆಹಂಗಾ ಧರಿಸಿದ್ದರು. ಅದ್ರ ಜೊತೆ ದುಪಟ್ಟಾ ಸಂಭಾಳಿಸೋದು ಕಷ್ಟವಾಗಿತ್ತು. ದುಪಟ್ಟಾ ನೆಲಕ್ಕೆ ತಾಗ್ತಿತ್ತು. ಆರಂಭದಲ್ಲಿ ಸೋನಂ ಅಸಿಸ್ಟೆಂಟ್ ದುಪಟ್ಟಾ ಹಿಡಿದುಕೊಂಡ್ರು. ತಕ್ಷಣ ಆನಂದ್ ಜವಾಬ್ದಾರಿ ತೆಗೆದುಕೊಂಡ್ರು. ಸೋನಂ ಸ್ಟೇಜ್ ಗೆ ಹೋಗುವವರೆಗೂ ಆನಂದ್ ಸೋನಂ ದುಪಟ್ಟಾ ಸಂಭಾಳಿಸಿದ್ರು. ಆನಂದ್ ಈ ಸರಳತೆ ನಟ ಅನಿಲ್ ಕಪೂರ್ ಗೂ ಇಷ್ಟವಾಗಿದೆ. ಆನಂದ್ ನನ್ನ ಅಳಿಯನಲ್ಲ, ಮಗ ಎಂದು ಈ ಹಿಂದೆ ಅವ್ರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...