alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನ್ಸರ್ ನೋವನ್ನು ಎಲ್ಲರ ಮುಂದಿಟ್ಟ ನಟಿ

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸೋನಾಲಿ ಸಾಮಾಜಿಕ ಜಾಲತಾಣದ ಮೂಲಕವೇ ತಮ್ಮ ಕ್ಯಾನ್ಸರ್ ವಿಷ್ಯವನ್ನು ಜನರ ಮುಂದಿಟ್ಟಿದ್ದರು. ಆಗಾಗ ಇನ್ಸ್ಟ್ರಾಗ್ರಾಮ್ ನಲ್ಲಿ ಚಿಕಿತ್ಸೆ, ಅನುಭವಿಸುವ ನೋವನ್ನು ಪ್ರಾಮಾಣಿಕವಾಗಿ ಹೇಳಿಕೊಳ್ತಾರೆ. ಜೊತೆಗೆ ತಮ್ಮನ್ನು ಸಂಭಾಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಸದ್ಯ ಸೋನಾಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಭಯ ನನ್ನನ್ನು ಆವರಿಸಿದ್ರೆ ನನ್ನ ಹೋರಾಟ ಇಲ್ಲಿಗೆ ಮುಗಿದಂತೆ ಎಂದು ಬರವಣಿಗೆ ಆರಂಭಿಸಿರುವ ಸೋನಾಲಿ, ಚೆರಿಲ್ ಸ್ಟ್ರೇಡ್ ವೈಲ್ಡ್ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.

ನಂತ್ರ ತಾವು ಅನುಭವಿಸಿದ ನೋವನ್ನು ಸೋನಾಲಿ ಬರೆದುಕೊಂಡಿದ್ದಾರೆ. ಆ ದಿನಗಳಲ್ಲಿ ತುಂಬಾ ಸುಸ್ತಾಗುತ್ತಿತ್ತು. ಬೆರಳು ಎತ್ತಲೂ ನನ್ನಿಂದ ಆಗ್ತಿರಲಿಲ್ಲ. ಶರೀರದಲ್ಲಾಗುವ ನೋವು ನಂತ್ರ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಕಿಮೋಥೆರಪಿ ಹಾಗೂ ಶಸ್ತ್ರಚಿಕಿತ್ಸೆ ನಂತ್ರ ನಗಲೂ ನೋವಾಗ್ತಾಯಿತ್ತು ಎಂದು ಸೋನಾಲಿ ಹೇಳಿದ್ದಾರೆ.

ನಾವು ಸುಖ, ದುಃಖ ಎರಡನ್ನೂ ಅನುಭವಿಸಲು ಬಂದಿದ್ದೇವೆ. ಹಾಗಾಗಿ ಅಳಲು, ನೋವನ್ನನುಭವಿಸಲು ನನಗೇ ನಾನೇ ಅನುಮತಿ ನೀಡಿದ್ದೇನೆಂದು ಸೋನಾಲಿ ಹೇಳಿದ್ದಾರೆ. ಸೋನಾಲಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುಟುಂಬಸ್ಥರಿಂದ ದೂರವಿರುವ ನೋವು ಅವ್ರನ್ನು ಕಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...