alex Certify
ಕನ್ನಡ ದುನಿಯಾ       Mobile App
       

Kannada Duniya

ಸೋನಾಲಿ ಬೇಂದ್ರೆ ಕ್ಯಾನ್ಸರ್ ಬಗ್ಗೆ ಅತ್ತಿಗೆ ಹೇಳಿದ್ದೇನು?

ಬಾಲಿವುಡ್ ಹಿರಿಯ ನಟಿ ಸೋನಾಲಿ ಬೇಂದ್ರೆ ಹೈ ಗ್ರೇಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಬುಧವಾರ ಸೋನಾಲಿ ಬೇಂದ್ರೆ ಕ್ಯಾನ್ಸರ್ ಇರುವ ಸಂಗತಿಯನ್ನು ಟ್ವೀಟರ್ ಮೂಲಕ ಹೇಳಿದ್ದಾರೆ. ಈ ವಿಷ್ಯ ಬಾಲಿವುಡ್ ಸೇರಿದಂತೆ ಅಭಿಮಾನಿಗಳಿಗೆ ಶಾಕ್ ನೀಡಿದೆ. ಅಭಿಮಾನಿಗಳು ಶೀಘ್ರ ಗುಣಮುಖಕ್ಕೆ ಪ್ರಾರ್ಥನೆ ಮಾಡ್ತಿದ್ದಾರೆ.

ಸೋನಾಲಿ ಬೇಂದ್ರೆ ಕ್ಯಾನ್ಸರ್ ಬಗ್ಗೆ ಅವ್ರ ಕುಟುಂಬದಿಂದ ಮೊದಲ ಪ್ರತಿಕ್ರಿಯೆ ಬಂದಿದೆ. ಸೋನಾಲಿ ಅತ್ತಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಚಾನಕ್ ಈ ಸಂಗತಿ ಗೊತ್ತಾಗಿದೆ. ಇಂಥ ವಿಷ್ಯಗಳು ಕೊನೆಯಲ್ಲಿಯೇ ತಿಳಿಯೋದು. ಸೋನಾಲಿ ಒಬ್ಬ ಹೋರಾಟಗಾರ್ತಿ. ಈ ಹೋರಾಟದಲ್ಲಿ ಅವ್ರು ಗೆದ್ದು ಬರ್ತಾರೆಂಬ ನಂಬಿಕೆಯಿದೆ. ಸೋನಾಲಿ ಧನಾತ್ಮಕವಾಗಿದ್ದಾರೆ. ಪ್ರೀತಿ ತೋರಿದ ಎಲ್ಲರಿಗೂ ಕೃತಜ್ಞರಾಗಿದ್ದಾರೆಂದು ಅತ್ತಿಗೆ ಹೇಳಿದ್ದಾರೆ.

ಸೋನಾಕ್ಷಿ ಭೇಟಿಗೆ ನ್ಯೂಯಾರ್ಕ್ ಗೆ ಹೋಗುವುದಾಗಿ ಹೇಳಿದ ಸೃಷ್ಟಿ, ಸೋನಾಕ್ಷಿ ತಮ್ಮ ಆರೋಗ್ಯದ ಬಗ್ಗೆ ಆಗಾಗ ಅಭಿಮಾನಿಗಳಿಗೆ ಮಾಹಿತಿ ನೀಡಲಿದ್ದಾರೆ ಎಂದ್ರು.

ಸೋನಾಲಿ ವಿಷ್ಯ ಗೊತ್ತಾಗ್ತಿದ್ದಂತೆ ಅಭಿಷೇಕ್ ಬಚ್ಚನ್, ಸೋನಮ್ ಕಪೂರ್, ಅನಿಲ್ ಕಪೂರ್, ಕರಣ್ ಜೋಹರ್, ಅರ್ಜುನ್ ಕಪೂರ್, ರಿತೇಶ್ ದೇಶ್ಮುಖ್ ಸೇರಿದಂತೆ ಅನೇಕ ಕಲಾವಿದರು ಶೀಘ್ರ ಗುಣಮುಖಕ್ಕೆ ಪ್ರಾರ್ಥಿಸಿದ್ದಾರೆ. ನ್ಯೂಯಾರ್ಕ್ ನಲ್ಲಿ ಸೋನಾಲಿ ಭೇಟಿ ಮಾಡಿದ ಅಕ್ಷಯ್ ಕುಮಾರ್ ಸೋನಾಲಿ ಗೆದ್ದು ಬರ್ತಾರೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...