alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ್ಡ್ ಲುಕ್ ನಲ್ಲಿ ಖುಷಿ ಹಂಚಿಕೊಂಡ ಸೋನಾಲಿ

ಬಾಲಿವುಡ್ ಬೆಡಗಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸದ್ಯ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಸೋನಾಲಿ ಬೇಂದ್ರೆ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾರೆ.

ಆರೋಗ್ಯದ ಜೊತೆ ಎಲ್ಲವನ್ನೂ ಹೇಗೆ ಎದುರಿಸುತ್ತಿದ್ದೇನೆ ಎಂಬುದನ್ನು ಸೋನಾಲಿ ಹೇಳುತ್ತಿದ್ದಾರೆ. ಈ ಮೂಲಕ ಅನೇಕ ರೋಗಿಗಳಿಗೆ ಮಾದರಿಯಾಗಿದ್ದಾರೆ. ಸೋನಾಲಿ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಸೋನಾಲಿ ‘A Gentleman In Moscow’ ಪುಸ್ತಕ ಹಿಡಿದಿದ್ದಾರೆ.

ಇಂದು #ReadABookDay. ಸೋನಾಲಿ ಬುಕ್ ಕ್ಲಬ್ ಗೆ ‘A Gentleman In Moscow’ ಪುಸ್ತಕ ಸೇರಿದೆ ಎಂದು ಶೀರ್ಷಿಕೆ ಹಾಕಿದ್ದಾರೆ. ರಷ್ಯಾದ ಕಾಲ್ಪನಿಕ ಕಥೆ ಇದಾಗಿದ್ದು, ತುಂಬಾ ಕಾಯಲು ಸಾಧ್ಯವಾಗಲಿಲ್ಲವೆಂದು ಸೋನಾಲಿ ಹೇಳಿದ್ದಾರೆ. ಸೋನಾಲಿ ಹಿಂದಿನ ವರ್ಷವಷ್ಟೇ ಸೋನಾಲಿ ಬುಕ್ ಕ್ಲಬ್ ಶುರು ಮಾಡಿದ್ದಾರೆ. ಡಿಜಿಟಲ್ ಬುಕ್ ಕ್ಲಬ್ ಗೆ ಈಗಾಗಲೇ ಅನೇಕ ಪುಸ್ತಕಗಳು ಸೇರಿವೆ.

ಸೋನಾಲಿ ಬಾಲ್ಡ್ ಲುಕ್ ನಲ್ಲಿ ಈ ಫೋಟೋ ಹಾಕಿದ್ದಾರೆ. ಸೋನಾಲಿ ಪುಸ್ತಕ ಪ್ರೇಮಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಒಳ್ಳೊಳ್ಳೆ ಕಮೆಂಟ್ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...