alex Certify
ಕನ್ನಡ ದುನಿಯಾ       Mobile App
       

Kannada Duniya

ಹಿರಿಯ ನಟ ರಿಷಿಗೆ ಖುಷಿ ಕೊಟ್ಟ ಪ್ರಿಯಾಂಕಾ ಚೋಪ್ರಾ

ಆರೈಕೆಯಲ್ಲಿರುವವರ ಮುಖದಲ್ಲಿ ಅನಂದ ಮೂಡಿಸುವುದೇ ದೊಡ್ಡ ಖುಷಿ. ಅಂಥದ್ದೊಂದು ಆನಂದವನ್ನು ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಮೂಡಿಸಿದ್ದಾರೆ. ಹಾಗೆ ಆನಂದಿಸಿದವರು ಬಾಲಿವುಡ್‍ನ ಖ್ಯಾತ ನಟ ರಿಷಿ ಕಪೂರ್-ನೀತು ಕಪೂರ್ ದಂಪತಿ ಹಾಗೂ ನಟಿ ಸೋನಾಲಿ ಬೇಂದ್ರೆ-ಗೋಲ್ಡಿ ಬೆಹ್ಲ್ ದಂಪತಿ.

ಸೋಮವಾರ ನ್ಯೂಯಾರ್ಕ್‍ಗೆ ತೆರಳಿದ್ದ ಪ್ರಿಯಾಂಕಾ ಚೋಪ್ರಾ ಮಾಡಿದ ಮೊದಲ ಕೆಲಸವೆಂದರೆ ನ್ಯೂಯಾರ್ಕ್‍ನಲ್ಲೇ ಇದ್ದ ನಟ ರಿಷಿ ಕಪೂರ್ ಹಾಗೂ ನೀತು ಕಪೂರ್ ಅವರನ್ನು ಭೇಟಿಯಾಗಿದ್ದು. ಅಲ್ಲಿಯೇ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವ ನಟಿ ಸೋನಾಲಿ ಹಾಗೂ ಆಕೆಯ ಪತಿ ಗೋಲ್ಡಿ ಬೆಹ್ಲ್ ಕೂಡ ಇದೇ ಸಂದರ್ಭದಲ್ಲಿ ಜೊತೆಗಿದ್ದಿದ್ದರಿಂದ ಅದೊಂದು ರೀತಿ ಗೆಟ್ ಟುಗೆದರ್ ಆಗಿತ್ತು. ಈ ಖುಷಿಯ ಕ್ಷಣಗಳ ಚಿತ್ರಗಳನ್ನು ನೀತು ಕಪೂರ್ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಈ ಮಧ್ಯೆ ರಿಷಿ ಕಪೂರ್ ಗೆ ಕ್ಯಾನ್ಸರ್, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದರೆ ಈ ಸುದ್ದಿಯನ್ನು ರಿಷಿ ಸೋದರ ರಣಧೀರ್ ಕಪೂರ್ ನಿರಾಕರಿಸಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...