alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕಿನಿ ತೊಡಲ್ವ ಎಂದವನಿಗೆ ನಿಮ್ಮಮ್ಮನಿಗೆ ಕೇಳು ಎಂದ ನಟಿ

Sonakshi-Sinh

ನವದೆಹಲಿ: ಸಿನಿಮಾ ನಟಿಯರೆಂದರೆ ಮೈಮಾಟ ತೋರಿಸಬೇಕಾ? ಬಿಕಿನಿ ತೊಡಬೇಕಾ? ಅಷ್ಟಕ್ಕೂ ಈ ಪ್ರಶ್ನೆ ಇಲ್ಲೇಕೆ ಅಂದಿರಾ? ಅಲ್ಲೇ ಇರೋದು ಸ್ವಾರಸ್ಯ. ನಟಿಯೊಬ್ಬಳ ಬಿಕಿನಿ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಅವರಿಗೆ ಅಭಿಮಾನಿಯೊಬ್ಬ ಅಸಂಬದ್ಧವಾಗಿ ಪ್ರಶ್ನಿಸಿದ್ದಾನೆ. ಟ್ವಿಟರ್ ನಲ್ಲಿ ನೀವು ಯಾವಾಗ ನಿಮ್ಮ ಮೈಮಾಟವನ್ನು ತೋರಿಸುತ್ತೀರಾ? ನೀವು ಬಿಕಿನಿ ತೊಡುವುದು ಯಾವಾಗ ಎಂದೆಲ್ಲಾ ಪ್ರಶ್ನಿಸಿದ್ದು, ಇದಕ್ಕೆ ಸೋನಾಕ್ಷಿ ಸಿನ್ಹಾ ಸರಿಯಾಗಿಯೇ ನೀರಿಳಿಸಿದ್ದಾರೆ. ನನಗೆ ಕೇಳಿರುವ ಪ್ರಶ್ನೆಯನ್ನು ನಿಮ್ಮ ಅಮ್ಮ ಅಥವಾ ಅಕ್ಕ- ತಂಗಿಯರಿಗೆ ಕೇಳು, ಅವರು ಏನು ಹೇಳುತ್ತಾರೆ ಎಂಬುದನ್ನು ನನಗೆ ನೀನು ಹೇಳಬೇಕೆಂದು ತಾಕೀತು ಮಾಡಿ ಸರಿಯಾಗಿ ಬೆವರಿಳಿಸಿದ್ದಾರೆ.

ಸೋನಾಕ್ಷಿ, ಟ್ವಿಟರ್ ನಲ್ಲಿ ಅಭಿಮಾನಿಯೊಂದಿಗಿನ ಮಾತುಕತೆಯಲ್ಲಿ ಚರ್ಚೆಯಲ್ಲಿದ್ದ ಸಂದರ್ಭದಲ್ಲಿ ಪ್ರತೀಕ್ ಗೋಯಲ್ ಎಂಬಾತ ಹೀಗೆ ಮೈಮಾಟ, ಬಿಕಿನಿ ಬಗ್ಗೆ ಅಸಂಬದ್ಧವಾಗಿ ಪ್ರಶ್ನಿಸಿದ್ದ. ಇದಕ್ಕೆ ಸೋನಾಕ್ಷಿ ಸರಿಯಾಗಿ ಜಾಡಿಸಿದ್ದರಿಂದ ಟ್ವಿಟರ್ ನಲ್ಲಿ ಇದೇ ಬಹು ಚರ್ಚಿತ ವಿಷಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...