alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದಯಾಘಾತದಿಂದ ಸೋನಾಕ್ಷಿ ಸಿನ್ಹಾ ಮೇಕಪ್ ಆರ್ಟಿಸ್ಟ್ ನಿಧನ

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮೇಕಪ್ ಆರ್ಟಿಸ್ಟ್ ನಿಲೇಶ್ ಪರ್ಮಾರ್ ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ನಿಲೇಶ್ ಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಸೋನಾಕ್ಷಿ ಸಿನ್ಹಾ ನಿಲೇಶ್ ರನ್ನು ನೀಲೂ ಎಂದು ಕರೆಯುತ್ತಿದ್ದರು ಎನ್ನಲಾಗಿದೆ.

ಸೋನಾಕ್ಷಿ ಸಿನ್ಹಾ ಇನ್ಸ್ಟ್ರಾಗ್ರಾಮ್ ನಲ್ಲಿ ನಿಲೇಶ್ ಫೋಟೋವೊಂದನ್ನು ಹಾಕಿ ನಿಲೇಶ್ ಸಾವಿನ ಸುದ್ದಿಯನ್ನು ಅಭಿಮಾನಿಗಳಿಗೆ ಹೇಳಿದ್ದಾರೆ. ನಿಲೇಶ್ ಸೋನಾಕ್ಷಿ ಆಪ್ತರಲ್ಲಿ ಒಬ್ಬರಾಗಿದ್ದರು ಎನ್ನಲಾಗಿದೆ. ಕುಟುಂಬವೊಂದರ ಭಾಗವಾಗಿದ್ದ ನಿಲೇಶ್ ನಿಂದಲೇ ತಾನಿಷ್ಟು ಸುಂದರವಾಗಿ ಕಾಣೋದು ಎಂದು ಸೋನಾಕ್ಷಿ ಸ್ನೇಹಿತರ ಮುಂದೆ ಹೇಳಿದ್ದಳು ಎನ್ನಲಾಗಿದೆ.

ನಿಲೇಶ್ ಸದಾ ಮನರಂಜನೆ ನೀಡ್ತಿರುತ್ತಾರೆ ಎಂದು ಸೋನಾಕ್ಷಿ ಆಗಾಗ ಹೇಳ್ತಿದ್ದರು. ದಬಾಂಗ್ ನಿಂದ ನಿಲೇಶ್ ಸೋನಾಕ್ಷಿಗೆ ಮೇಕಪ್ ಮಾಡ್ತಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಪ್ರಸಿದ್ಧ ಮೇಕಪ್ ಆರ್ಟಿಸ್ಟ್ ಗಳಿದ್ದರೂ ಸೋನಾಕ್ಷಿ ನಿಲೇಶ್ ಆಯ್ಕೆ ಮಾಡಿಕೊಂಡಿದ್ದರು. 2013ರಲ್ಲಿ ನಿಲೇಶ್ ಹುಟ್ಟುಹಬ್ಬವನ್ನು ಸೆಟ್ ನಲ್ಲಿ ಭರ್ಜರಿಯಾಗಿ ಆಚರಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...