alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನಟಿಯನ್ನು ಹೋಲುವವಳೀಗ ಫುಲ್ ಡಿಮ್ಯಾಂಡು

4434sonakshisinhalookalikeಜಗತ್ತಿನಲ್ಲಿ ಒಬ್ಬ ವ್ಯಕ್ತಿಯಂತೆ ಏಳು ಮಂದಿ ಹೋಲುತ್ತಾರೆ ಎಂಬ ಮಾತಿದೆ. ಅದರಲ್ಲೂ ಸೆಲೆಬ್ರಿಟಿಗಳಂತೆ ಕಾಣುವವರಿಗೆ ಭಾರೀ ಡಿಮ್ಯಾಂಡ್ ಇರುತ್ತದಲ್ಲದೇ ಬೆಳಗಾಗುವುದರೊಳಗಾಗಿ ಫೇಮಸ್ ಆಗಿ ಬಿಡುತ್ತಾರೆ.

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾರಂತೆ ಕಾಣುವ ಪ್ರಿಯಾ ಮುಖರ್ಜಿಗೂ ಈಗ ಅದೃಷ್ಟ ಖುಲಾಯಿಸಿದ್ದು, ಸಿನಿಮಾ ಹಾಗೂ ಟೆಲಿವಿಜನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಫರ್ ಗಳು ಬರುತ್ತಿವೆಯಂತೆ. ಪ್ರಿಯಾ ಮುಖರ್ಜಿ ತಾಯಿ ಇಟಲಿಯವರಾದರೆ, ತಂದೆ ಭಾರತೀಯರು.

ಪ್ರಸ್ತುತ ಲಂಡನ್ ನಲ್ಲಿ ನೆಲೆಸಿರುವ ಪ್ರಿಯಾ ಮುಖರ್ಜಿ ಸಿನಿಮಾ ಆಫರ್ ಗಳು ಬರುತ್ತಿರುವ ಕಾರಣ ಭಾರತಕ್ಕೆ ತಮ್ಮ ವಾಸ್ತವ್ಯ ಬದಲಿಸಲು ಯೋಚಿಸುತ್ತಿದ್ದಾರಂತೆ. ಸಲ್ಮಾನ್ ಖಾನ್ ಜೊತೆಗಿನ ಸೋನಾಕ್ಷಿ ಸಿನ್ಹಾ ಅಭಿನಯದ ‘ದಬಾಂಗ್’ ಚಿತ್ರ ನೋಡಿದ್ದ ಸ್ನೇಹಿತರು ನೀನು ಸೋನಾಕ್ಷಿಯಂತೆ ಕಾಣುತ್ತಿಯಾ ಎಂದು ಪ್ರಿಯಾ ಮುಖರ್ಜಿಗೆ ತಿಳಿಸಿದ್ದು, ಅಂದಿನಿಂದ ಪ್ರಿಯಾ ಮುಖರ್ಜಿ ಸೋನಾಕ್ಷಿ ಸಿನ್ಹಾ ಧರಿಸುವಂತಹ ಉಡುಪುಗಳನ್ನೇ ಹೆಚ್ಚು ಧರಿಸುತ್ತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...