alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ಯಾಸಿನಿಯಾದ್ಲು ಟಾಪ್ ಲೆಸ್ ಮಾಡೆಲ್

download

ಸಂಬಳ, ಹೆಸರು ಎಷ್ಟೇ ಬರಲಿ ಒಂದೇ ಕೆಲಸ ಬೋರ್ ಆಗೋದು ಕಾಮನ್. ಹಾಟ್ ಎಂಡ್ ಬ್ಯೂಟಿ ವಿಚಾರದಲ್ಲೂ ಅಷ್ಟೆ. ಎಷ್ಟು ಬಾರಿ ಅಂತಾ ಟಾಪ್ ಬಿಚ್ಚಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡ್ತಾರೆ ಹೇಳಿ. ತುಂಡುಡುಗೆ ತೊಟ್ಟು, ಕ್ಯಾಟ್ ವಾಕ್ ಮಾಡಿ ಬಹುಷಃ ನಮ್ಮ ಮಾಡೆಲ್ ಸೋಫಿಯಾ ಹಯಾತ್ ಗೂ ಬೋರಾದಂತಿದೆ. ಹಾಗಾಗಿಯೇ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾಳೆ.

ಬೆತ್ತಲೆ ಫೋಟೋ ಅಪ್ ಲೋಡ್ ಮಾಡಿ ಸಾಕಷ್ಟು ಸುದ್ದಿ ಮಾಡಿದ್ದ ಮಾಡೆಲ್, ನಟಿ, ಗಾಯಕಿ ಸೋಫಿಯಾ ಹಯಾತ್  ಈಗ ಸಂಪೂರ್ಣ ಬದಲಾಗಿದ್ದಾಳೆ. ಹಾಟ್ ಹಾಟ್ ಲುಕ್ ನಲ್ಲಿ ಆಕೆಯನ್ನು ನೋಡಲು ಇಷ್ಟಪಡ್ತಿದ್ದ ಪಡ್ಡೆಗಳಿಗೆ ನಿರಾಸೆಯಾಗುವ ಸುದ್ದಿ ಇದು. ಯಾಕೆಂದ್ರೆ ಸೋಫಿಯಾ ಈಗ ಮಾಡೆಲ್ ಅಲ್ಲ, ಮದರ್.

ಅಂದ್ರೆ ಸೋಫಿಯಾ ಅಮ್ಮನಾಗಿಲ್ಲ. ಗ್ಲಾಮರ್ ದುನಿಯಾ ಬಿಟ್ಟು ಆಧ್ಯಾತ್ಮದ ಕಡೆ ಒಲವು ತೋರಿದ್ದಾಳೆ. ಮೇಕಪ್, ಹೇರ್ ಕಲರ್, ಫ್ಯಾಷನ್ ಎಲ್ಲದಕ್ಕೂ ಗುಡ್ ಬೈ ಹೇಳಿ ಸನ್ಯಾಸಿಯಾಗಿದ್ದಾಳೆ. ಈ ವಿಷಯವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾಳೆ ಸೋಫಿಯಾ. ಬಿಗ್ ಬಾಸ್ 7ನೇ ಆವೃತ್ತಿಯ ಸ್ಪರ್ಧಿ ಸೋಫಿಯಾ, ಸನ್ಯಾಸಿ ಬಟ್ಟೆ ಧರಿಸಿರುವ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಅಪ್ ಲೋಡ್ ಮಾಡಿದ್ದಾಳೆ. ವಿಚಿತ್ರ ಅಂದ್ರೆ ಸನ್ಯಾಸಿ ಬಟ್ಟೆ ಧರಿಸಿದ್ರೂ ಆಕೆ ಲುಕ್ ಕೆಲವರನ್ನು ಕೊಲ್ತಾ ಇದೆಯಂತೆ. ಸೋಫಿಯಾ ಹೊಸ ಫೋಟೋಗಳು ಸಾಕಷ್ಟು ಸುದ್ದಿ ಮಾಡ್ತಾ ಇವೆ.

ಮೂಲತಃ ಬ್ರಿಟನ್ ನ ಸೋಫಿಯಾ ಸೆಕ್ಸಿ ಮಹಿಳೆ ಎಂದು ಪ್ರಸಿದ್ಧಿ ಪಡೆದಿದ್ದಳು. FHM ಮ್ಯಾಗಝೀನ್ ಸೆಪ್ಟೆಂಬರ್ 2013 ರಲ್ಲಿ ಸೆಕ್ಸಿಯೆಸ್ಟ್ ವುಮೆನ್ ಪಟ್ಟಿಯಲ್ಲಿ ಸೋಫಿಯಾಗೆ 81 ನೇ ಸ್ಥಾನ ನೀಡಿತ್ತು. ಬಾಲಿವುಡ್ ರೆಡ್ ಕಾರ್ಪೆಟ್ ನಲ್ಲಿ ಕೂಡ ಸೋಫಿಯಾ ಸಾಕಷ್ಟು ಸುದ್ದಿ ಮಾಡಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಟಾಪ್ ಲೆಸ್ ಹಾಗೂ ಬೋಲ್ಡ್ ಫೋಟೋಗಳನ್ನು ಹಾಕಿ ಆಗಾಗ ಚರ್ಚೆಯಾಗ್ತಿದ್ದಳು ಸೋಫಿಯಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...