alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಶಿಕ್ಷೆಗೆ ಖುಷಿ ವ್ಯಕ್ತಪಡಿಸಿದ ಬಾಲಿವುಡ್ ಬೆಡಗಿ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆಯಾಗಿದೆ. ಸಲ್ಮಾನ್ ಖಾನ್ ಶಿಕ್ಷೆಗೆ ಬಾಲಿವುಡ್ ನ ಅನೇಕ ಕಲಾವಿದರು ದುಃಖ ವ್ಯಕ್ತಪಡಿಸಿದ್ದಾರೆ. ಒಳ್ಳೆ ವ್ಯಕ್ತಿಗೆ ಹೀಗಾಗಬಾರದಿತ್ತು ಎಂದು ಕೆಲವರು ಹೇಳಿದ್ರೆ ಕಾನೂನು ಕುರುಡಾಗಿದೆ ಅಂತಾ ಮತ್ತೆ ಕೆಲವರು ಹೇಳಿದ್ದಾರೆ. ಆದ್ರೆ ಬಾಲಿವುಡ್ ಬೆಡಗಿಯೊಬ್ಬಳು ಸಲ್ಮಾನ್ ಶಿಕ್ಷೆಗೆ ಖುಷಿಯಾಗಿದ್ದಾಳೆ.

ಯಸ್, ಸಲ್ಮಾನ್ ಶಿಕ್ಷೆಗೆ ಗುರಿಯಾಗ್ತಿದ್ದಂತೆ ನಟಿ ತನ್ನ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ನಟಿ ಹಾಗೂ ಮಾಡೆಲ್ ಸೋಫಿಯಾ, ಸಲ್ಮಾನ್ ಗೆ ಶಿಕ್ಷೆಯಾಗಿದ್ದು ಸರಿ ಎಂದಿದ್ದಾಳೆ. ತಪ್ಪು ಮಾಡಿದವ್ರು ಅದ್ರ ಫಲವನ್ನು ಅನುಭವಿಸಲೇಬೇಕು ಎಂದು ಸೋಫಿಯಾ ಹೇಳಿದ್ದಾಳೆ.

ಇನ್ಸ್ಟ್ರಾಗ್ರಾಮ್ ನಲ್ಲಿ ದೊಡ್ಡ ಪೋಸ್ಟ್ ಒಂದನ್ನು ಸೋಫಿಯಾ ಹಾಕಿದ್ದಾಳೆ. ಸಲ್ಮಾನ್ ಬಗ್ಗೆ ಮಾತನಾಡಲು ಬಾಲಿವುಡ್ ಹೆದರುತ್ತದೆ. ಆದ್ರೆ ನನಗೆ ಭಯವಿಲ್ಲ. ಸಲ್ಮಾನ್ ತಪ್ಪು ಮಾಡಿದ್ದರಿಂದ ಶಿಕ್ಷೆಯಾಗಿದೆ. ಪ್ರಾಣಿ ಹತ್ಯೆ ಪಾಪದ ಕೆಲಸ. ಸಲ್ಮಾನ್ ಖಾನ್ ಒಬ್ಬ ಕಲಾವಿದನಾಗಿ ಇಂಥ ಕೆಲಸ ಮಾಡಿದ್ದಾನೆ. ತನ್ನ ಸ್ವಾರ್ಥಕ್ಕಾಗಿ ಪ್ರಾಣಿ ಕೊಲೆ ಮಾಡಿ ನಂತ್ರ ಕಾನೂನಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಆತನನ್ನು ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕರು ಫಾಲೋ ಮಾಡ್ತಾರೆ. ಒಬ್ಬ ಸೆಲೆಬ್ರಿಟಿ ದಾರಿ ತಪ್ಪುವುದು ಸರಿಯಲ್ಲ. ತಪ್ಪು ಮಾಡಿದವರು ಭಾರತದ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ ಎಂದು ಸೋಫಿಯಾ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...