alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ ಲೈಟ್ ಏರಿಯಾದಲ್ಲಿ ಕಾಣಿಸಿಕೊಂಡ್ಲು ಈ ನಟಿ

ಬಾಲಿವುಡ್ ನಟಿ ಶೋಭಿತಾ ಧುಲಿಪಾಲ ತನ್ನ ಮುಂದಿನ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾಳೆ. ಮೂಥಾನ್ ಹೆಸರಿನ ಚಿತ್ರದಲ್ಲಿ ನಟಿಸುತ್ತಿರುವ ಶೋಭಿತಾ ಸೆಕ್ಸ್ ವರ್ಕರ್ ಪಾತ್ರದಲ್ಲಿ ಮಿಂಚಲಿದ್ದಾಳೆ. ಪಾತ್ರಕ್ಕೆ ಸಿದ್ಧಳಾಗುತ್ತಿರುವ ಶೋಭಿತಾ ರೆಡ್ ಲೈಟ್ ಏರಿಯಾದಲ್ಲಿ ಕಾಣಿಸಿಕೊಂಡಿದ್ದಾಳೆ.

ಕಮಾಟಿಪುರ ರೆಡ್ ಲೈಟ್ ಏರಿಯಾಕ್ಕೆ ಹೋಗಿದ್ದ ಶೋಭಿತಾ ಅಲ್ಲಿರುವ ಸೆಕ್ಸ್ ವರ್ಕರ್ಸ್ ಜೊತೆ ಮಾತನಾಡಿದ್ದಾಳೆ. ಕಮಾಟಿಪುರ ರೆಡ್ ಲೈಟ್ ಏರಿಯಾದ ಪ್ರಭಾವಶಾಲಿ ಮಹಿಳೆಯೊಬ್ಬಳ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಮೂಥಾನ್ ನಲ್ಲಿ ಅನಿರೀಕ್ಷಿತವಾಗಿ ನನಗೆ ಈ ಪಾತ್ರ ಸಿಕ್ಕಿದೆ. ಕಮಾಟಿಪುರದಲ್ಲಿ ಅನೇಕ ಮಹಿಳೆಯರ ಜೊತೆ ಮಾತುಕತೆ ನಡೆಸಿದ್ದೇನೆ. ಹಾಗೆ ಕುಟುಂಬವೊಂದು ವಾಸವಾಗಿರುವ ಸಣ್ಣ ಕೋಣೆಯಲ್ಲಿ ನಾನೂ ಕೆಲ ಸಮಯ ಕಳೆದಿದ್ದೇನೆಂದು ಶೋಭಿತಾ ಹೇಳಿದ್ದಾಳೆ.

ನಿರ್ಮಾಪಕ ಅನುರಾಗ್ ಕಶ್ಯಪ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಗೀತು ಮೋಹನ್ದಾಸ್ ಚಿತ್ರದ ನಿರ್ದೇಶನದ ಹೊಣೆ  ಹೊತ್ತಿದ್ದಾರೆ. ಈ ಚಿತ್ರ 2018ರಲ್ಲಿ ಮಲೆಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...