alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೀರ್ ಖಾನ್ ಗೆ ಶಾಕ್ ನೀಡಿದ ಸ್ನಾಪ್ ಡೀಲ್

457444-amirkhan-snapdeal

ಅಸಹಿಷ್ಣುತೆ ಕುರಿತಾಗಿ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿದ್ದ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಭಾರತದ ಆನ್ ಲೈನ್ ಮಾರುಕಟ್ಟೆ ಕಂಪನಿ ಸ್ನಾಪ್ ಡೀಲ್ ಈಗ ರಾಯಭಾರಿ ಸ್ಥಾನದಿಂದ ವಜಾಗೊಳಿಸುವ ಮೂಲಕ ಮತ್ತೊಂದು ಶಾಕ್ ನೀಡಿದೆ.

ಹೌದು. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವ ಮೂಲಕ ಅಮೀರ್ ಖಾನ್ ವಿವಾದ ಸೃಷ್ಟಿಸಿದ್ದರು. ಅವರ ಈ ಹೇಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಪ್ರಮಾಣದ ವಿರೋಧ ವ್ಯಕ್ತವಾಗಿತ್ತು. ಅದಾದ ಬಳಿಕ ಭಾರತ ಸರ್ಕಾರದ ‘ಇನ್ ಕ್ರೆಡಿಬಲ್ ಇಂಡಿಯಾ’ ದಿಂದಲೂ ಅಮೀರ್ ಖಾನ್ ರನ್ನು ಕೈಬಿಡಲಾಗಿತ್ತು.

ಇದೀಗ ಅಮೀರ್ ಖಾನ್ ಅವರೊಂದಿಗಿನ ಒಂದು ವರ್ಷದ ಗುತ್ತಿಗೆ ಅವಧಿ ಮುಂದಿನ ತಿಂಗಳು ಅಂತ್ಯವಾಗಲಿದ್ದು, ಈ ಗುತ್ತಿಗೆಯನ್ನು ಮತ್ತೆ ಮುಂದುವರಿಸದೇ ಅವರನ್ನು ರಾಯಭಾರ ಪಟ್ಟದಿಂದ ತೆಗೆದು ಹಾಕಲು ಸ್ನಾಪ್ ಡೀಲ್ ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...