alex Certify
ಕನ್ನಡ ದುನಿಯಾ       Mobile App
       

Kannada Duniya

`ಅದು ಕೆಟ್ಟ ಚಟ’ ಎಂದಿದ್ದಾಳೆ ಸನ್ನಿ ಲಿಯೋನ್

sunny-1

ಒಂದು ಕಾಲದಲ್ಲಿ ಅಶ್ಲೀಲ ಚಿತ್ರಗಳಲ್ಲಿ ನಟಿಸುತ್ತಿದ್ದ ಬೆಡಗಿ ಸನ್ನಿ ಲಿಯೋನ್ ಈಗಾಗಲೇ ಬಾಲಿವುಡ್ ನಲ್ಲಿ ತನ್ನ ಛಾಪು ಮೂಡಿಸಿದ್ದಾಳೆ. ಒಂದಾದ ಮೇಲೆ ಒಂದು ಚಿತ್ರಗಳಲ್ಲಿ ನಟಿಸ್ತಿದ್ದಾಳೆ. ಸಿಕ್ಕಾಪಟ್ಟೆ ಬ್ಯುಸಿ ಇರುವ ಬೆಡಗಿ ಕೆಲವು ಸಾಮಾಜಿಕ ಸೇವೆಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾಳೆ.

ಸದ್ಯ ಧೂಮಪಾನ ವಿರೋಧಿ ಜಾಹೀರಾತೊಂದರಲ್ಲಿ ಸನ್ನಿ ಕಾಣಿಸಿಕೊಳ್ತಿದ್ದಾಳೆ. ನಟ ಅಲೋಕ್ ನಾಥ್ ಹಾಗೂ ದೀಪಕ್ ಜೊತೆ ಜಾಹೀರಾತಿನಲ್ಲಿ ನಟಿಸಲಿದ್ದಾಳೆ. ಸಿಗರೇಟ್ ಬಗ್ಗೆ ಮಾತನಾಡಿರುವ ಸನ್ನಿ, ಧೂಮಪಾನ ಕೆಟ್ಟದ್ದು ಎಂದಿದ್ದಾಳೆ. ಅನೇಕರು ಈ ಚಟಕ್ಕೆ ದಾಸರಾಗಿದ್ದಾರೆ, ಆದ್ರೆ ಧೂಮಪಾನವೊಂದು ಕೆಟ್ಟ ಹವ್ಯಾಸ ಎಂದಿದ್ದಾಳೆ.

ಜಾಹೀರಾತು ನೋಡಿದ ತಕ್ಷಣ ಜನರು ತಮ್ಮ ಧೂಮಪಾನ ಚಟವನ್ನು ಬಿಡಬೇಕೆಂದು ಸನ್ನಿ ಟ್ವಿಟ್ ಮಾಡಿದ್ದಾಳೆ. ‘ಮಸ್ತಿಜಾದೆ’ ಚಿತ್ರದ ನಂತ್ರ ಈಗ ಸನ್ನಿ ‘ಒನ್ ನೈಟ್ ಸ್ಟ್ಯಾಂಡ್’ ಹಾಗೂ ‘ಬೇಯಿಮಾನ್’ ಚಿತ್ರದಲ್ಲಿ ನಟಿಸ್ತಿದ್ದಾಳೆ. ಎರಡೂ ಚಿತ್ರಗಳು ಕೆಲವೇ ದಿನಗಳಲ್ಲಿ ಬಾಲಿವುಡ್ ನಲ್ಲಿ ಧೂಳೆಬ್ಬಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...