alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ ನಿರ್ಮಾಪಕರಿಗೆ ಬ್ಲಾಕ್ಮೇಲ್: 6 ಮಂದಿ ಅರೆಸ್ಟ್

baahubali

‘ಬಾಹುಬಲಿ 2 : ದಿ ಕನ್ ಕ್ಲೂಶನ್’ ಚಿತ್ರದ ಪೈರೆಟೆಡ್ ಸಿಡಿಯನ್ನು ಹಂಚುವುದಾಗಿ ಧಮಕಿ ಹಾಕಿದ್ದಲ್ಲದೆ, ಹಣಕ್ಕಾಗಿ ಬೆದರಿಕೆ ಹಾಕಿದ್ದ 6 ಮಂದಿಯನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಾಹುಬಲಿ ಸಿನೆಮಾದ ಪೈರೆಟೆಡ್ ಸಿಡಿಯನ್ನು ಇಂಟರ್ನೆಟ್ ನಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದ ದುಷ್ಕರ್ಮಿಗಳು, ಕರಣ್ ಜೋಹರ್ ಸೇರಿದಂತೆ ಉಳಿದ ನಿರ್ಮಾಪಕರ ಬಳಿ 15 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

ರಾಹುಲ್ ಮೆಹ್ತಾ ಎಂಬಾತ ಚಿತ್ರ ನಿರ್ಮಾಪಕರನ್ನು ಸಂಪರ್ಕಿಸಿದ್ದ. ತಾನು ಆ್ಯಂಟಿ ಪೈರೆಸಿ ಏಜೆನ್ಸಿ ನಡೆಸುತ್ತಿದ್ದು, ತನ್ನ ಬಳಿ ಬಾಹುಬಲಿ ಚಿತ್ರದ ಪೈರೆಟೆಡ್ ಹೈ ಡೆಫಿನೇಶನ್ ಪ್ರಿಂಟ್ ಇದೆ. ಸ್ವಲ್ಪ ಕಾಲ ಅದನ್ನು ಇಂಟರ್ನೆಟ್ ನಲ್ಲಿ ಅಪ್ ಲೋಡ್ ಮಾಡದಂತೆ ತಡೆಹಿಡಿದಿದ್ದೇನೆ, ಹಣ ಕೊಡದೇ ಇದ್ರೆ ಅಪ್ ಲೋಡ್ ಮಾಡಿಬಿಡ್ತೇನೆ ಅಂತಾ ಬ್ಲಾಕ್ ಮೇಲ್ ಮಾಡಿದ್ದ.

ಹೈದ್ರಾಬಾದ್ ನ ಜ್ಯುಬಿಲಿ ಹಿಲ್ಸ್ ನಲ್ಲಿ ರಾಹುಲ್ ಮೆಹ್ತಾನನ್ನು ವಾರದ ಹಿಂದೆಯೇ ಬಂಧಿಸಲಾಗಿತ್ತು. ಆತ ಜಿತೇಂದ್ರ ಮೆಹ್ತಾ, ತೌಫಿಕ್, ಮೊಹಮ್ಮದ್ ಅಲಿ ಹೆಸರನ್ನು ಬಾಯ್ಬಿಟ್ಟಿದ್ದ. ಮರುದಿನವೇ ಅವರನ್ನೂ ಪೊಲೀಸರು ಸೆರೆ ಹಿಡಿದಿದ್ದರು. ಇನ್ನಿಬ್ಬರನ್ನು ಬಿಹಾರದಲ್ಲಿ ಬಂಧಿಸಲಾಗಿದೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...