alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಗಾಯಕನಿಗೆ ಮೂರು ತಿಂಗಳು ಜೈಲು

ಅಪ್ರಾಪ್ತನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗರ್ಗ್ ಗೆ ಕೋರ್ಟ್ 3 ತಿಂಗಳ ಕಠಿಣ ಸಜೆ ಹಾಗೂ 5000 ರೂಪಾಯಿ ದಂಡ ವಿಧಿಸಿದೆ. ಗಾಯಕ ಜುಬೀನ್ ಅಪರಾಧಿ ಅಂತಾ ತೀರ್ಪು ನೀಡಿದ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್, ಮೇಲ್ಮನವಿ ಹೋಗಲು ಅವಕಾಶ ಕೂಡ ಕಲ್ಪಿಸಿದೆ.

2013ರಲ್ಲಿ ಜುಬೀನ್ ಪುಟ್ಟ ಬಾಲಕನೊಬ್ಬನಿಗೆ ಸಾರ್ವಜನಿಕ ಸ್ಥಳದಲ್ಲೇ ಕಪಾಳಕ್ಕೆ ಬಾರಿಸಿದ್ದರು. ಹೊಡೆತ ತಿಂದ ಬಾಲಕನ ತಂದೆ ಅರೂಪ್ ಬಾರ್ಬೊರಾ ಅಸ್ಸಾಂನ ಖ್ಯಾತ ವಕೀಲ. ಆತ ಜುಬೀನ್ ಗರ್ಗ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲ ಬಾಲಕ ಅಪ್ರಾಪ್ತನಾಗಿದ್ರೂ ಜುಬೀನ್, ಮಾಧ್ಯಮಗಳ ಎದುರು ಆತನ ಹೆಸರನ್ನು ಬಹಿರಂಗಪಡಿಸಿದ್ದರು.

ಕೋರ್ಟ್ ನೀಡಿರುವ ಶಿಕ್ಷೆ ಬಗ್ಗೆ ಗಾಯಕ ಉಡಾಫೆಯ ಮಾತನಾಡಿದ್ದಾರೆ. ಇದೊಂದು ಸಾಮಾನ್ಯ ಪ್ರಕರಣ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಬೇಕಿಲ್ಲ, ನನ್ನ ವಕೀಲರು ನೋಡಿಕೊಳ್ತಾರೆ ಎಂದಿದ್ದಾರೆ. ಇನ್ನೊಂದೆಡೆ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಜುಬೀನ್ ಪರ ವಕೀಲರು ನಿರ್ಧರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...