alex Certify
ಕನ್ನಡ ದುನಿಯಾ       Mobile App
       

Kannada Duniya

ಮೀಟೂ ಎಫೆಕ್ಟ್: ಕೈಲಾಶ್ ಖೇರ್ ಕಾರ್ಯಕ್ರಮ ರದ್ದು

ಪ್ರಸಿದ್ಧ ಗಾಯಕ ಕೈಲಾಶ್ ಖೇರ್ ವಿರುದ್ಧ ಕೆಲ ದಿನಗಳ ಹಿಂದಷ್ಟೇ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಒಬ್ಬರಾದ್ಮೇಲೆ ಒಬ್ಬರಂತೆ ಅನೇಕ ಮಹಿಳೆಯರು ಕೈಲಾಶ್ ವಿರುದ್ಧ ದೂರಿದ್ದಾರೆ. ಮೀಟೂ ಅಭಿಯಾನ ಕೈಲಾಶ್ ವೃತ್ತಿ ಮೇಲೆ ಪರಿಣಾಮ ಬೀರಿದೆ. ದೀಪಾವಳಿ ಹಿನ್ನೆಲೆಯಲ್ಲಿ ಉದಯ್ಪುರದಲ್ಲಿ ನಡೆಯಬೇಕಿದ್ದ ಕೈಲಾಶ್ ಖೇರ್ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಅಕ್ಟೋಬರ್ 30 ರಂದು ದೀಪಾವಳಿ ವಿಶೇಷ ಗಾಯಕರ ಸಂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕೈಲಾಶ್ ಖೇರ್ ಕೂಡ ಹಾಡಬೇಕಿತ್ತು. ಆದ್ರೆ ಅವ್ರ ಮೇಲೆ ಲೈಂಗಿಕ ಕಿರುಕುಳ ಆರೋಪ ಬರ್ತಿದ್ದಂತೆ ಆಯೋಜಕರು ಪಟ್ಟಿಯಿಂದ ಕೈಲಾಶ್ ಹೆಸರನ್ನು ತೆಗೆದು ಹಾಕಿದ್ದಾರೆ.

ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಯಾವುದೇ ವಿವಾದ ಏಳದಿರಲಿ ಎನ್ನುವ ಕಾರಣಕ್ಕೆ ಕೈಲಾಶ್ ರಿಗೆ ಅವಕಾಶ ನೀಡ್ತಿಲ್ಲ. ಅವ್ರ ಬದಲು ದರ್ಶನ್ ರಾವಲ್ ಹಾಡಲಿದ್ದಾರೆಂದು ಆಯೋಜಕರು ಹೇಳಿದ್ದಾರೆ. ಗಾಯಕಿ ಸೋನಾ ಮಹಾಪಾತ್ರ ನಂತ್ರ ಇನ್ನೊಬ್ಬ ಮಹಿಳೆ ಕೈಲಾಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಳೆ. 2004ರಲ್ಲಿ ಕೈಲಾಶ್ ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದ ಎಂದು ಫ್ಯಾಮಿಲಿ ಫ್ರೆಂಡ್ ಒಬ್ಬಳು ಆರೋಪ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...