alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮಾವತಿ ವಿವಾದ ಬಗೆಹರಿಸಲು ಸಿಮಿ ಗರೇವಾಲ್ ಮಧ್ಯಸ್ಥಿಕೆ…?

ಪದ್ಮಾವತಿ ವಿವಾದ ಬಗೆಹರಿಸಲು ನಟಿ ಸಿಮಿ ಗರೇವಾಲ್ ಮುಂದಾಗಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ಚಿತ್ರಗಳ ಪಕ್ಕಾ ಅಭಿಮಾನಿಯಾಗಿರೋ ಸಿಮಿ, ಜೈಪುರದ ಪ್ರಭಾವಿ ರಾಣಿ ಪದ್ಮಿನಿ ಹಾಗೂ ಚಿತ್ರ ತಂಡದ ಮಧ್ಯೆ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ.

ಸಿನೆಮಾ ನಿಷೇಧಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಕರ್ಣಿ ಸೇನಾ ಜೊತೆಗೆ ಶಾಂತಿ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಸಿಮಿ ಗರೇವಾಲ್, ರಾಣಿ ಪದ್ಮಿನಿ  ಅವರ ಆತ್ಮೀಯ ಸ್ನೇಹಿತೆ. ಇನ್ನು ರಾಣಿ ಪದ್ಮಿನಿ ಕೂಡ ಭನ್ಸಾಲಿ ಅವರ ಅಭಿಮಾನಿ.

ಆದ್ರೆ ಚಿತ್ರದಲ್ಲಿ ಮಹಾರಾಣಿ ಪದ್ಮಾವತಿ ಘೂಮರ್ ಹಾಡಿಗೆ ನೃತ್ಯ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಣಿ ಪದ್ಮಿನಿ ಹಾಗೂ ಸಿಮಿ ಗರೆವಾಲ್ ಸುಮಾರು ಒಂದು ಗಂಟೆ ಚರ್ಚೆ ನಡೆಸಿದ್ದಾರೆ. ರಾಣಿ ಪದ್ಮಾವತಿ ನೃತ್ಯ ಮಾಡಿರಲಿಲ್ಲ, ಆ ಸಮಯದಲ್ಲಿ ಮಹಾರಾಣಿಯರು ಸಾರ್ವಜನಿಕರ ಎದುರು ನೃತ್ಯ ಮಾಡುವಂತಿರಲಿಲ್ಲ ಅಂತಾ ಪದ್ಮಿನಿ ಅಭಿಪ್ರಾಯಪಟ್ಟಿದ್ದಾರೆ.

ಟ್ರೈಲರ್ ನಲ್ಲಿ ಘೂಮರ್ ಹಾಡೊಂದನ್ನು ಬಿಟ್ರೆ ಇನ್ಯಾವುದಕ್ಕೂ ರಾಣಿ ಪದ್ಮಿನಿ ಆಕ್ಷೇಪಿಸಿಲ್ಲ ಅಂತಾ ಸಿಮಿ ಗರೆವಾಲ್ ತಿಳಿಸಿದ್ದಾರೆ. ಮಹಾರಾಣಿ ಪದ್ಮಿನಿ ಹಾಗೂ ಸಂಜಯ್ ಲೀಲಾ ಭನ್ಸಾಲಿ ನಡುವೆ ನೇರ ಮಾತುಕತೆ ಏರ್ಪಡಿಸುವುದು ಸಿಮಿ ಗರೇವಾಲ್ ಅವರ ಉದ್ದೇಶ.

ಮಹಾರಾಣಿ ಪದ್ಮಿನಿಗಾಗಿ ಪ್ರತ್ಯೇಕವಾಗಿ ಸಿನೆಮಾ ಪ್ರದರ್ಶಿಸಬೇಕು ಅನ್ನೋದು ಸಿಮಿ ಅಭಿಪ್ರಾಯ. ಪದ್ಮಿನಿ ಒಪ್ಪಿಕೊಂಡಲ್ಲಿ ಚಿತ್ರ ಬಿಡುಗಡೆಯಾಗಲಿದೆ, ಪ್ರತಿಭಟನೆಗಳು ಕೂಡ ತಣ್ಣಗಾಗಲಿವೆ ಅಂತಾ ಸಿಮಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...