alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಶ್ಲೀಲ’ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಟ ಪ್ರತ್ಯಕ್ಷ

simbu

ಏನೋ ಮಾಡಲು ಹೋಗಿ ಮತ್ತೇನೋ ಮಾಡಿಕೊಂಡರು ಎಂಬಂತೆ ಹಾಡು ಹಾಡಲು ಹೋಗಿ ವಿವಾದಕ್ಕೆ ಸಿಲುಕಿದ್ದ ನಟರೊಬ್ಬರು ತಲೆಮರೆಸಿಕೊಂಡಿದ್ದರು. ಬಹುದಿನಗಳ ಅಜ್ಞಾತವಾಸದ ನಂತರ ಅವರೀಗ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ತಮಿಳು ಚಿತ್ರರಂಗದ ಖ್ಯಾತ ನಟರಾಗಿದ್ದ ಸಿಂಬು, ಅಶ್ಲೀಲ ಹಾಡೊಂದನ್ನು ಹಾಡಿ ವಿವಾದಕ್ಕೆ ಕಾರಣವಾಗಿದ್ದರು. ವಿವಾದ ಕಾವೇರುತ್ತಿದ್ದಂತೆ ಅವರು ತಲೆಮರೆಸಿಕೊಂಡಿದ್ದರು. ‘ಕೊಲವೆರಿ ಡಿ’ ಖ್ಯಾತಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಹಾಗೂ ಈ ವಿವಾದಿತ ಹಾಡನ್ನು ಹಾಡಿದ್ದ ನಟ ಸಿಂಬು ವ್ಯಾಪಕ ವಿರೋಧ ಎದುರಿಸುವಂತಾಗಿತ್ತು. ಕಾರಣವೇನೆಂದರೆ, ಅವರು ಹಾಡಿದ್ದ ಹಾಡಿನಲ್ಲಿ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿ ಪದ ಬಳಸಲಾಗಿತ್ತು.

ಹೀಗೆ ಹಾಡೊಂದರಲ್ಲಿ ಸಿಂಬು ಹೆಣ್ಣುಮಕ್ಕಳ ಬಗ್ಗೆ ಆಕ್ಷೇಪಾರ್ಹ ಶಬ್ದಗಳನ್ನು ಬಳಸಿದ್ದರಿಂದ ಅವರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದು, ವಿವಿಧ ಕಡೆಗಳಲ್ಲಿ ಕೇಸು ದಾಖಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಸಿಂಬು, ಕೊಯಮತ್ತೂರಿನ ಕಾಟೂರ್ ಪೊಲೀಸ್ ಠಾಣೆಗೆ ಹಾಜರಾದರು. ಈ ಹಿಂದೆಯೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತ್ತು. ಅಲ್ಲದೇ, ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಇದರಿಂದ ಅನ್ಯ ಮಾರ್ಗವಿಲ್ಲದೇ ಅವರು ವಿಚಾರಣೆಗೆ ಹಾಜರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...