alex Certify
ಕನ್ನಡ ದುನಿಯಾ       Mobile App
       

Kannada Duniya

ಜಲ್ಲಿಕಟ್ಟು ಹೋರಾಟಕ್ಕೆ ನಟ ಸಿಂಬು ಕರೆ

tn-jalli

ಚೆನ್ನೈ: ಸುಗ್ಗಿ ಹಬ್ಬದ ಸಂಭ್ರಮದಲ್ಲಿರುವ ತಮಿಳುನಾಡಿನಲ್ಲಿ, ಈ ಬಾರಿ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಒತ್ತಡ ಹೇರಲಾಗುತ್ತಿದೆ.

ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಸಾಂಪ್ರದಾಯಿಕ ಗೂಳಿ ಪಳಗಿಸುವ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸಲಾಗುತ್ತದೆ.

ಈಗಾಗಲೇ ರಾಜಕೀಯ, ಸಿನಿಮಾ ಕ್ಷೇತ್ರಗಳ ಗಣ್ಯರು, ಜಲ್ಲಿಕಟ್ಟು ಕ್ರೀಡೆಯನ್ನು ನಡೆಸಿಯೇ ತೀರುವುದಾಗಿ ಹೇಳಿಕೆ ನೀಡಿದ್ದು, ತಮಿಳುನಾಡಿನಲ್ಲಿ ಭಾರೀ ಪ್ರತಿಭಟನೆಗಳೇ ನಡೆದಿವೆ.

ಇಂದು ಸಂಜೆ 5 ಗಂಟೆಗೆ ತಮಿಳುನಾಡಿನಾದ್ಯಂತ 10 ನಿಮಿಷ ಜನ ತಾವಿರುವ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಬೇಕೆಂದು ನಟ ಸಿಂಬು ಕರೆ ನೀಡಿದ್ದಾರೆ.

ಜಲ್ಲಿಕಟ್ಟು ಕ್ರೀಡೆ ನಿಷೇಧಿಸಿರುವುದು ಸರಿಯಲ್ಲ. ಇದನ್ನು ನಡೆಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ, ತಮಿಳುನಾಡಿನ ಜನ 10 ನಿಮಿಷ ರಸ್ತೆಗೆ ಇಳಿದು ಪ್ರತಿಭಟನೆ ಮಾಡುವ ಮೂಲಕ, ಹೋರಾಟ ಬೆಂಬಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • GST ಜಾರಿಗೊಂಡ ಬಳಿಕ ಬಗೆಹರಿಯುತ್ತಾ ಜನ ಸಾಮಾನ್ಯರ ಬವಣೆ..?

    View Results

    Loading ... Loading ...