alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಹಿಕಹಿ ಚಂದ್ರು –ದಯಾನಂದ್ ನಡುವೆ ಚಕಮಕಿ

‘ಬಿಗ್ ಬಾಸ್’ ಮನೆಯಲ್ಲಿ ವಾತಾವರಣ ಕಾವೇರಿದ್ದು, ಸವಾಲ್ ನಲ್ಲಿ ಗೆಲ್ಲಲು ಸದಸ್ಯರ ನಡುವೆ ಪೈಪೋಟಿ ನಡೆದಿದೆ. ಇದರ ನಡುವೆಯೇ ಒಬ್ಬೊಬ್ಬರ ಕುರಿತಾಗಿ ಮತ್ತೊಬ್ಬರು ಮಾತನಾಡುವುದು ಮುಂದುವರೆದಿದೆ.

ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ಸದಸ್ಯರ ಪರಿಪೂರ್ಣತೆ ಮತ್ತು ಸೂಕ್ಷ್ಮತೆ ತಿಳಿಯಲು ಒಂದು ಮೊಟ್ಟೆಯ ಕತೆ -ವಿವಿಧ ಹಂತದ ಸವಾಲ್ ಗಳನ್ನು ನೀಡಲಾಗಿದೆ. ಬುಧವಾರ ‘ಮೊಟ್ಟೆಯ ಪಾಡು’ ಸವಾಲ್ ನಲ್ಲಿ ಎದುರಾಳಿ ತಂಡದಿಂದ ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಸದಸ್ಯರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಮೊಟ್ಟೆ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ದಯಾನಂದ್ ಹಾಗೂ ಜೆ.ಕೆ. ನಡುವೆ ಮಾತಿನ ಚಕಮಕಿ ನಡೆದಿದೆ. ನಂತರದಲ್ಲಿ ಸಿಹಿಕಹಿ ಚಂದ್ರು ಮತ್ತು ದಯಾನಂದ್ ನಡುವೆ ಭಾರೀ ವಾಗ್ವಾದವೇ ನಡೆದಿದೆ.

ದಯಾನಂದ್ ಅವರ ತಂಡದ ಮೊಟ್ಟೆಯನ್ನು ನಾಶಪಡಿಸಲು ತೆರಳಿದ್ದ ಚಂದ್ರು ಅವರಿಗೆ ದಯಾನಂದ್ ಅಡ್ಡಿಪಡಿಸಿದ್ದಾರೆ. ಇದೇ ವಿಚಾರ ವಿಕೋಪಕ್ಕೆ ತಿರುಗಿ ತಾಳ್ಮೆ ಕಳೆದುಕೊಂಡ ಚಂದ್ರು ರೇಗಾಡಿದ್ದಾರೆ. ದಯಾನಂದ್ ಕೂಡ ಕೂಗಾಡಿದ್ದಾರೆ.

ಸದಸ್ಯರು ಎಷ್ಟೆಲ್ಲಾ ಸಮಾಧಾನಪಡಿಸಲು ಪ್ರಯತ್ನಿಸಿದರೂ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನು ಚಂದನ್ ತೋರಿದ ವರ್ತನೆ ಬಗ್ಗೆ ಅನುಪಮಾ ಬೇರೆ ಸದಸ್ಯರ ಬಳಿ ಆಕ್ಷೇಪಿಸಿದ್ದಾರೆ. ನಂತರದಲ್ಲಿ ಚಂದನ್ ಕ್ಷಮೆ ಕೇಳಿದ್ದರಿಂದ ಪರಿಸ್ಥಿತಿ ತಿಳಿಯಾಗಿದೆ.

ಜಯಶ್ರೀನಿವಾಸನ್ ತಲೆಗೆ ಎಣ್ಣೆ ಹಾಕಿ ದಯಾನಂದ್ ಮಸಾಜ್ ಮಾಡಿದ್ದು, ಇದು ರಾಜ್ಯದ ಸಂಖ್ಯಾಶಾಸ್ತ್ರಜ್ಞನ ತಲೆಯಾಗಿದೆ. ಹುಷಾರಾಗಿ ಮಸಾಜ್ ಮಾಡು ಎಂದು ಶ್ರೀನಿವಾಸನ್ ಗತ್ತಿನಲ್ಲಿ ಹೇಳಿದ್ದು ವಿಶೇಷವಾಗಿತ್ತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...