alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯ ಬದುಕನ್ನು ತೆರೆ ಮೇಲೆ ತರಲು ಮಗನ ಕಸರತ್ತು

ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಲಂಡನ್ ಗೆ ಓಡಿ ಹೋಗಿರೋ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ಹೊಸ ಪ್ರಾಜೆಕ್ಟ್ ಗೆ ಕೈಹಾಕಿದ್ದಾರೆ. ಇದೊಂದು ಡೈನಾಮಿಕ್ ಇಂಟರ್ ನ್ಯಾಶನಲ್ ಸಿರೀಸ್. ಭಾರತದ ಪ್ರಮುಖ ಉದ್ಯಮಿಗಳ ಕುಟುಂಬದ ಒಳ ನೋಟವನ್ನು ತೆರೆದಿಡುವ ಕಾರ್ಯಕ್ರಮ.

ಸದ್ಯ ‘Vultures’ ಎಂದು ಈ ಶೋಗೆ ಹೆಸರಿಡಲಾಗಿದೆ. ಇದಕ್ಕಾಗಿ ಹೋಮ್ ಕಮಿಂಗ್ ನಿರ್ಮಾಪಕ ಪೌಲ್ ಕಾಂಫ್ ಜೊತೆಗೆ ಸಿದ್ ಪಾಲುದಾರಿಕೆ ಮಾಡಿಕೊಂಡಿದ್ದಾರೆ. ತಂದೆ ವಿಜಯ್ ಮಲ್ಯರ ಬದುಕು ಮತ್ತು ಅನುಭವಗಳಿಂದ ಪ್ರೇರಣೆ ಪಡೆದು ಸಿದ್ದಾರ್ಥ್ ಈ ಶೋ ಮಾಡ್ತಿದ್ದಾರಂತೆ.

ಅಷ್ಟಕ್ಕೂ ಮಲ್ಯ ಸಮಾಜಕ್ಕೆ ಪ್ರೇರಣೆಯಾಗುವಂಥ ಕೆಲಸ ಏನ್ಮಾಡಿದ್ದಾರೆ ಅನ್ನೋದು ಜನರ ಪ್ರಶ್ನೆ. ಮದ್ಯದ ದೊರೆಯಾಗಿ ಮೆರೆದು, ಭಾರತದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ಉಂಡೆನಾಮ ಹಾಕಿ ಪರಾರಿಯಾಗಿರೋ ಪಲಾಯನವಾದಿ ಮಲ್ಯ. ಅವರ ಬಗ್ಗೆ ಮಗ ಅದೆಂಥಾ ಶೋ ಮಾಡ್ತಾನೋ ಅನ್ನೋ ಕುತೂಹಲ ಕೂಡ ಎಲ್ಲರಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...