alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಯಾರಾ ಮೋಟಾರ್ ನಲ್ಲಿ ಸಂಭ್ರಮಿಸಿದ ಶುಭಾ ಪೂಂಜಾ

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ಅವುಗಳಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ ಒಂದಾಗಿದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ.

ಸಾಹಸ, ಜಲಕ್ರೀಡೆಗಳು ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ಪ್ರವಾಸೋದ್ಯಮಕ್ಕೆ ಜಿಲ್ಲಾಡಳಿತ ಒತ್ತು ನೀಡಿದೆ.

ಪ್ಯಾರಾ ಮೋಟಾರ್ ರೈಡ್ ಕಾರವಾರಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ನಟಿ ಶುಭಾ ಪೂಂಜಾ ಅವರು ಪ್ಯಾರಾ ಮೋಟಾರ್ ನಲ್ಲಿ ಹಾರಾಡಿ ಸಂಭ್ರಮಿಸಿದ್ದಾರೆ. ಸಾವಿರಾರು ಅಡಿ ಎತ್ತರದಲ್ಲಿ ಸಮುದ್ರ ಹಾಗೂ ಕಾರವಾರದ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ತಮ್ಮ ಸಂಭ್ರಮದ ಕ್ಷಣಗಳನ್ನು ಸೆಲ್ಫಿಯಲ್ಲಿ ಸೆರೆ ಹಿಡಿದಿದ್ದಾರೆ.

ಸ್ನೇಹಿತೆಯರೊಂದಿಗೆ ಕಾರವಾರಕ್ಕೆ ತೆರಳಿದ್ದ ಶುಭ ಪೂಂಜಾ, ಪ್ಯಾರಾ ಮೋಟಾರ್ ರೈಡ್ ಮಾಡಿದ್ದು, ಕಡಲಿನಾಳದಲ್ಲಿಯೂ ವಿಹರಿಸುವ ಬಯಕೆ ಇದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...