alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಕಿರುಕುಳದ ರಹಸ್ಯ ಬಿಚ್ಚಿಟ್ಟಿದ್ದ ಶ್ರುತಿ ಹರಿಹರನ್ ಬಳಿಕ ಹೇಳಿದ್ದೇನು…?

ಸ್ಯಾಂಡಲ್ ವುಡ್ ಸೇರಿದಂತೆ ಬಹುಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಖ್ಯಾತ ನಟಿ ಶ್ರುತಿ ಹರಿಹರನ್, ತಮಗೆ ನಿರ್ಮಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದು ಭಾರೀ ಸುದ್ದಿಯಾಗಿತ್ತು.

ಇದಕ್ಕೆ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ನಾನು ಮಾಡಿದ ಆರೋಪಗಳು ಚಿತ್ರರಂಗಕ್ಕೆ ಬರುವವರನ್ನು ಹೆದರಿಸಲು ಹೇಳಿದ್ದಲ್ಲ. ಚಿತ್ರರಂಗದಲ್ಲಿ ನನಗಾದ ಅನುಭವ ಹೇಳಿದ್ದೇನೆ. ಚಿತ್ರರಂಗದಲ್ಲಿ ಒಳ್ಳೆಯವರು ಹೆಚ್ಚಾಗಿದ್ದಾರೆ. ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಚಿತ್ರರಂಗ ನನಗೆ ಖುಷಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.

ಸಿನಿಮಾ ರಂಗದಲ್ಲಿ ನನ್ನಂತೆಯೇ ಅನೇಕರಿಗೆ ಅನುಭವಗಳಾಗಿವೆ. ಅದರ ನಡುವೆಯೂ ಹಲವಾರು ಮಂದಿ ಯಾವುದೇ ತೊಂದರೆ ಇಲ್ಲದೇ ನೆಲೆ ಕಂಡುಕೊಂಡಿದ್ದಾರೆ. ಪ್ರತಿಭೆ ಮತ್ತು ಪರಿಶ್ರಮ ಇದ್ದಲ್ಲಿ ಅವಕಾಶ, ಪ್ರತಿಫಲ ಸಿಗುತ್ತದೆ ಎಂದು ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಶ್ರುತಿ ಹರಿಹರನ್ ತಮಗಾದ ಅನುಭವವನ್ನು ಹೇಳಿಕೊಂಡಿದ್ದರು. 18 ನೇ ವಯಸ್ಸಿನಲ್ಲಿ ಶ್ರುತಿ ಹರಿಹರನ್ ನೃತ್ಯಗಾತಿಯಾಗಿದ್ದರು. ಆಗ ನಿರ್ಮಾಪಕರೊಬ್ಬರು ಮಂಚಕ್ಕೆ ಕರೆದಿದ್ದಾರೆ. ತಾವು 5 ಮಂದಿ ಇದ್ದು ನಮ್ಮೊಂದಿಗೆ ಸಹಕರಿಸಿದರೆ, ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಆಮಿಷವೊಡ್ಡಿದ್ದು, ಇದಕ್ಕೆ ಶ್ರುತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಪ್ಪಲಿಯಲ್ಲಿ ಹೊಡೆಯುವುದಾಗಿ ನಿರ್ಮಾಪಕನಿಗೆ ನೀರಿಳಿಸಿದ್ದಾರೆ.

ಇದನ್ನು ಶ್ರುತಿ ಅವರೇ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದು, ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...