alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಶ್ರುತಿ ಹೇಳಿದ ರಹಸ್ಯ

shruthi 123

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ವಿನ್ನರ್ ಶ್ರುತಿ, ಬಿಗ್ ಬಾಸ್ ಮನೆಯಲ್ಲಿನ ಅನುಭವಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕನ್ನಡದ ಪ್ರತಿಭಾವಂತ ನಟಿಯಾದ ಶ್ರುತಿ, ಬಿಗ್ ಬಾಸ್ ಮನೆಯಲ್ಲಿ ಎಷ್ಟೆಲ್ಲಾ ಸಂಕಷ್ಟ ಎದುರಾದರೂ ಕೊನೆವರೆಗೂ ತಾಳ್ಮೆ ಕಳೆದುಕೊಂಡವರಲ್ಲ.

ಮನೆಯಲ್ಲಿ ಸ್ಪರ್ಧಿಗಳಿಂದ ಸೈ ಎನಿಸಿಕೊಂಡಿದ್ದ ಶ್ರುತಿ, ವಿಜೇತರಾಗಿ ಹೊರಬಂದ ನಂತರ ಅಲ್ಲಿನ ಅನುಭವದ ಬಗ್ಗೆ ಹೇಳಿದ್ದು, ಶೋನಲ್ಲಿ ಎಲ್ಲಾ ಟಾಸ್ಕ್ ಎಂಜಾಯ್ ಮಾಡಿದ್ದೇನೆ. ಸ್ಪರ್ಧಿಗಳು ಕೂಡ ಸಹಕಾರ ನೀಡಿದ್ದಾರೆ. ಅಲ್ಲದೇ, ನನ್ನ ವ್ಯಕ್ತಿತ್ವ, ತಾಳ್ಮೆಗೆ ಜನ ಮನ್ನಣೆ ನೀಡಿದ್ದಾರೆ. ಅವರಿಗೆಲ್ಲಾ ನಾನು ಋಣಿಯಾಗಿದ್ದೇನೆ ಎಂದರು. ನಾನು ಏನನ್ನೂ ಬಯಸಿದ್ದರೂ ಜನ ಎಲ್ಲವನ್ನೂ ಕೊಟ್ಟಿದ್ದಾರೆ. ಬಿಗ್ ಬಾಸ್ ನಲ್ಲಿ ಚಾನ್ಸ್ ಸಿಗೋದೇ ಹೆಮ್ಮೆಯ ವಿಷಯ. ನನಗೆ ಗೆಲುವು ಸಿಕ್ಕಿದ್ದು ಖುಷಿ ತಂದಿದೆ ಎಂದು ಹೇಳಿದ್ದಾರೆ.

ದ್ವಾರಕೀಶ್ ಅವರು ಸಿನಿಮಾದಲ್ಲಿ ನನಗೆ ಅವಕಾಶ ನೀಡಿ ಜೀವನಕ್ಕೊಂದು ತಿರುವು ನೀಡಿದರು. ನಾನು ಬಿಗ್ ಬಾಸ್ ನಲ್ಲಿ ಗೆದ್ದ ನಂತರ ಮತ್ತೆ ತಿರುವು ಸಿಕ್ಕಿದೆ. ಮನೆಗೆ ಸಾಕಷ್ಟು ಸ್ಕ್ರಿಪ್ಟ್ ಬಂದಿರುವುದಾಗಿ ಅಮ್ಮ ಹೇಳಿದ್ದಾರೆ. ಅವನ್ನೆಲ್ಲಾ ನೋಡುತ್ತೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...