alex Certify
ಕನ್ನಡ ದುನಿಯಾ       Mobile App
       

Kannada Duniya

ರಷ್ಯಾ ಗೆಳೆಯನೊಂದಿಗೆ ಸಪ್ತಪದಿ ತುಳಿಯಲಿದ್ದಾರೆ ಈ ನಟಿ

ಬಹುಭಾಷಾ ತಾರೆ ಶ್ರಿಯಾ ಸರಣ್ ಹೊಸ ಬಾಳಿಗೆ ಅಡಿಯಿಡಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ರಷ್ಯನ್ ಗೆಳೆಯನ ಜೊತೆಗೆ ಶ್ರಿಯಾ ಸಪ್ತಪದಿ ತುಳಿಯಲಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ರಾಜಸ್ತಾನದಲ್ಲಿ ಶ್ರಿಯಾ ಡೆಸ್ಟಿನೇಶನ್ ವೆಡ್ಡಿಂಗ್ ಗೆ ಪ್ಲಾನ್ ಮಾಡಿದ್ದಾರಂತೆ.

ಇತ್ತೀಚೆಗಷ್ಟೆ ತಮ್ಮ ಗೆಳೆಯನ ಕುಟುಂಬಸ್ಥರನ್ನು ಭೇಟಿಯಾಗಲು ಶ್ರಿಯಾ ರಷ್ಯಾಕ್ಕೆ ತೆರಳಿದ್ರು. ಅವರಿಂದ್ಲೂ ಸಲಹೆ ಪಡೆದು ಬಳಿಕ ರಾಜಸ್ತಾನದಲ್ಲೇ ವಿವಾಹವಾಗಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

35ರ ಹರೆಯದ ಶ್ರಿಯಾ 2001ರಲ್ಲಿ ತೆಲುಗಿನ ಇಷ್ಟಂ ಚಿತ್ರದ ಮೂಲಕ ಸಿನೆಮಾ ರಂಗಕ್ಕೆ ಕಾಲಿಟ್ಟಿದ್ದರು. 2003ರಲ್ಲಿ ತುಜೆ ಮೇರಿ ಕಸಮ್ ಮೂಲಕ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದರು. 2008ರಲ್ಲೇ ಶ್ರಿಯಾ ಹಾಲಿವುಡ್ ನಲ್ಲೂ ನಟಿಸಿದ್ದಾರೆ.

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸಿದ್ದ ಶಿವಾಜಿ ಭರ್ಜರಿ ಹಿಟ್ ಕೂಡ ಆಗಿತ್ತು. ದೃಶ್ಯಂ ಚಿತ್ರದಲ್ಲಿ ಶ್ರಿಯಾ, ಅಜಯ್ ದೇವಗನ್ ಗೆ ಜೋಡಿಯಾಗಿದ್ದರು. ಸದ್ಯ ಬಿಗ್ ಬ್ಯಾನರ್ ನ 4 ಚಿತ್ರಗಳಲ್ಲಿ ಶ್ರಿಯಾ ಅಭಿನಯಿಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...