alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಸಾವಿನ ವೇಳೆ ವರದಿಗಾರರ ಮುಂದೆ ಅನುಪಮ್ ಖೇರ್ ಹೇಳಿದ್ದೇನು?

ನಟಿ ಶ್ರೀದೇವಿ ಅಂತ್ಯಸಂಸ್ಕಾರ ಬುಧವಾರ ನೆರವೇರಿದೆ. ಹಿರಿಯ ನಟ ಅನುಪಮ್ ಖೇರ್ ಶ್ರೀದೇವಿ ಮನೆಯ ಪಕ್ಕದ ಮನೆಯಲ್ಲಿ ವಾಸವಾಗಿದ್ದಾರೆ. ಶ್ರೀದೇವಿ ಸಾವಿನ ಸುದ್ದಿ ಎಲ್ಲರನ್ನೂ ದಂಗಾಗಿಸಿದೆ. ಶ್ರೀದೇವಿ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಅನುಪಮ್ ಖೇರ್ ಕೂಡ ಇದಕ್ಕೆ ಹೊರತಾಗಿಲ್ಲ.

ಶ್ರೀದೇವಿ ನಿಧನದ ಸುದ್ದಿ ನಂತ್ರ ಶ್ರೀದೇವಿ ಮನೆ ಮುಂದೆ ಮಾಧ್ಯಮ ಪ್ರತಿನಿಧಿಗಳ ದಂಡೇ ನೆರೆದಿತ್ತು. ಶ್ರೀದೇವಿ ಮನೆ ಮುಂದೆಯೇ ವರದಿಗಾರರು ಮೊಕ್ಕಾಂ ಹೂಡಿದ್ದರು. ಇದನ್ನು ನೋಡಿ ಅವರ ಬಳಿ ಬಂದ ಅನುಪಮ್ ಖೇರ್ ವರದಿಗಾರರ ಯೋಗಕ್ಷೇಮ ವಿಚಾರಿಸಿದ್ದಾರೆ.

ನಮ್ಮ ಮನೆ ಇಲ್ಲೇ ಪಕ್ಕದಲ್ಲಿದೆ. ತುಂಬಾ ಸಮಯದಿಂದ ನೀವು ಇಲ್ಲೇ ಇದ್ದೀರಾ. ನಿಮಗೆ ಟೀ, ತಿಂಡಿ ಏನಾದ್ರೂ ವ್ಯವಸ್ಥೆ ಮಾಡಲಾ ಎಂದು ಖೇರ್ ಕೇಳಿದ್ದಾರೆ. ಅನುಪಮ್ ಖೇರ್ ಕಾಳಜಿಗೆ ವರದಿಗಾರರು ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ನಿನ್ನೆಯವರೆಗೆ ಇದ್ದವರು ಈಗಿಲ್ಲ. ಇದ್ದಿದ್ದರು ಎಂಬ ಶಬ್ಧ ಬಳಸಲು ಬೇಸರವಾಗುತ್ತದೆ ಎಂದು ಅನುಪಮ್ ಖೇರ್ ಮಾಧ್ಯಮಗಳ ಮುಂದೆ ದುಃಖ ತೋಡಿಕೊಂಡ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...