alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಗೆ ಜೋಡಿಯಾಗ್ತಿರೋ ಶ್ರದ್ಧಾ ಸಾಹೋ ಬಗ್ಗೆ ಹೇಳಿದ್ದಿಷ್ಟು….

ಸಾಹೋ ಚಿತ್ರಕ್ಕೆ ನಾಯಕಿಯ ಆಯ್ಕೆ ಆದಾಗಿನಿಂದ್ಲೂ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಳನ್ನು ಜೊತೆಯಾಗಿ ನೋಡಲು ಅಭಿಮಾನಿಗಳಲ್ಲಿ ತವಕ ಹೆಚ್ಚಾಗಿದೆ. ಕೇವಲ ಪ್ರಭಾಸ್ ಫ್ಯಾನ್ಸ್ ಮಾತ್ರವಲ್ಲ, ಖುದ್ದು ಶ್ರದ್ಧಾ ಕೂಡ ತನಗೆ ಸಿಕ್ಕಿರೋ ಚಾನ್ಸ್ ಬಗ್ಗೆ ಫುಲ್ ಖುಷಿಯಾಗಿದ್ದಾಳೆ.

ಸಾಹೋ ಚಿತ್ರದ ಕಥೆ ಹಾಗೂ ತನ್ನ ಪಾತ್ರ ಎರಡೂ ಶ್ರದ್ಧಾಗೆ ಇಷ್ಟವಾಗಿದೆಯಂತೆ. ಬಾಹುಬಲಿಯ ಸೂಪರ್ ಹೀರೋ ಪ್ರಭಾಸ್ ಜೊತೆ ನಟಿಸಲು ತುದಿಗಾಲಲ್ಲಿದ್ದಾಳೆ ಈ ಬಾಲಿವುಡ್ ನಟಿ. ಪ್ರಭಾಸ್ ಗೆ ಜೋಡಿಯಾಗಲು ಶ್ರದ್ಧಾ ಸೂಕ್ತ ಅಂತಾ ಚಿತ್ರತಂಡ ನಿರ್ಧರಿಸಿದಾಗಿನಿಂದ್ಲೂ, ಆಕೆ ಮಾಧ್ಯಮಗಳಲ್ಲಿ ಸುದ್ದಿಯಾಗ್ತಾನೇ ಇದ್ದಾಳೆ.

ಬಹಳ ದಿನಗಳ ನಂತರ ತೆಲುಗು ಚಿತ್ರದಲ್ಲಿ ನಟಿಸ್ತಾ ಇರೋ ಬಾಲಿವುಡ್ ನಾಯಕಿ ಅಂದ್ರೆ ಶ್ರದ್ಧಾ ಕಪೂರ್. ಯಾಕಂದ್ರೆ ಪ್ರಾದೇಶಿಕ ಭಾಷೆಗಳ ಸಿನೆಮಾ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ತಲುಪುವುದಿಲ್ಲ ಅನ್ನೋ ಭಾವನೆ ಇದೆ.

ಹಾಗಾಗಿ ಬಾಲಿವುಡ್ ನಟಿಯರು ಪ್ರಾದೇಶಿಕ ಚಿತ್ರಗಳಲ್ಲಿ ನಟಿಸಲು ಹಿಂದೇಟು ಹಾಕ್ತಾರೆ. ಆದ್ರೆ ಪ್ರಭಾಸ್ ಹೊಸ ಅಲೆಯನ್ನೇ ಹುಟ್ಟುಹಾಕಿರೋದ್ರಿಂದ, ಅದ್ಭುತ ನಟನಿಗೆ ಜೋಡಿಯಾಗಲು ಶ್ರದ್ಧಾಗೆ ಅದ್ಭುತ ಅವಕಾಶ ಸಿಕ್ಕಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...