alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕ್ ಅಪ್ ಬಗ್ಗೆ ಕೊನೆಗೂ ಬಾಯ್ಬಿಟ್ಲು ಈ ನಟಿ

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹಾಗೂ ರಾಜ್ಕುಮಾರ್ ರಾವ್ ಅಭಿನಯದ ಸ್ತ್ರೀ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹಾರರ್, ಕಾಮಿಡಿ ಚಿತ್ರದಲ್ಲಿ ಶ್ರದ್ಧಾ-ರಾಜ್ಕುಮಾರ್ ರಾವ್ ಜೋಡಿ ಅಭಿಮಾನಿಗಳಿಗೆ ಇಷ್ಟವಾಗಿದೆ. ಶ್ರದ್ಧಾ ಕಪೂರ್ ಬ್ರೇಕ್ ಅಪ್ ಬಗ್ಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೆ ಟ್ರೈಲರ್ ಬಿಡುಗಡೆ ವೇಳೆ ಬ್ರೇಕ್ ಅಪ್ ಬಗ್ಗೆ ಮಾತನಾಡಿದ್ದಾಳೆ.

ಶ್ರದ್ಧಾ ಕಪೂರ್ ಹಾಗೂ ಫರ್ಹಾನ್ ಅಕ್ತರ್ ಮಧ್ಯೆ ಸದ್ದಿಲ್ಲದೆ ಪ್ರೀತಿ ಚಿಗುರಿತ್ತು. ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ಶ್ರದ್ಧಾ ಇನ್ಸ್ಟ್ರಾಗ್ರಾಮ್ ನಲ್ಲಿ ಫರ್ಹಾನ್ ಅಕ್ತರ್ ಅನ್ ಫಾಲೋ ಮಾಡಿದ್ದಾಳೆ. ಇದಾದ ಬಳಿಕ ಇಬ್ಬರ ಮಧ್ಯೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿ ಹರಡಿತ್ತು.

ಟ್ರೈಲರ್ ಬಿಡುಗಡೆ ವೇಳೆ ಯಾವ ವಿಚಾರಕ್ಕೆ ನಿಮಗೆ ತುಂಬಾ ನೋವಾಗಿದೆ ಎಂದು ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶ್ರದ್ಧಾ ಪ್ರೀತಿ ಮುರಿದು ಬಿದ್ದಾಗ ತುಂಬಾ ನೋವಾಗುತ್ತದೆ ಎಂದಿದ್ದಾಳೆ. ಶ್ರದ್ಧಾ ಈ ಮಾತು ತುಂಬಾ ಆಶ್ಚರ್ಯ ಹುಟ್ಟಿಸಿದೆ. ಯಾಕೆಂದ್ರೆ ಶ್ರದ್ಧಾ ಈವರೆಗೂ ಪ್ರೀತಿ ಬಗ್ಗೆಯಾಗ್ಲಿ, ಬ್ರೇಕ್ ಅಪ್ ಬಗ್ಗೆಯಾಗ್ಲಿ ಯಾವುದೇ ಹೇಳಿಕೆ ನೀಡಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...