alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಜೊತೆ ನಟಿಸಲು ಶ್ರದ್ಧಾಗೆ ಸಿಕ್ತು ಇಷ್ಟು ಕೋಟಿ..?

prabhas_shraddha_story_1024_1502878652_618x347

ಬಾಹುಬಲಿ ಯಶಸ್ಸಿನ ನಂತ್ರ ನಟ ಪ್ರಭಾಸ್ ಸಾಹೋ ಚಿತ್ರದಲ್ಲಿ ನಟಿಸ್ತಿದ್ದಾರೆ. ಈ ಚಿತ್ರಕ್ಕೆ ಹಿರೋಯಿನ್ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಅನುಷ್ಕಾ ಶೆಟ್ಟಿ, ಕತ್ರಿನಾ ಕೈಫ್ ಸೇರಿದಂತೆ ಅನೇಕ ಸ್ಟಾರ್ ನಟಿಯರ ಹೆಸರು ಕೇಳಿ ಬಂದಿತ್ತು. ಕೊನೆಯದಾಗಿ ಶ್ರದ್ಧಾ ಕಪೂರ್ ಹೆಸರು ಅಂತಿಮಗೊಂಡಿದೆ.

ಸದ್ಯ ಎಲ್ಲರನ್ನು ಕಾಡ್ತಿರುವ ಪ್ರಶ್ನೆ ಶ್ರದ್ಧಾ ಪ್ರಭಾಸ್ ಜೊತೆ ನಟಿಸಲು ಎಷ್ಟು ಹಣ ಪಡೆದಿದ್ದಾಳೆ ಎನ್ನೋದು. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ಶ್ರದ್ಧಾ ನಾಲ್ಕು ಕೋಟಿ ಸಂಭಾವನೆ ಪಡೆಯಲಿದ್ದಾಳಂತೆ. ನ್ಯೂಸ್ ಪೋರ್ಟಲ್ ವರದಿಯೊಂದು 9 ಕೋಟಿ ರೂಪಾಯಿ ಎನ್ನುತ್ತಿದೆ.

ಬಾಲಿವುಡ್ ನಲ್ಲಿ ಯಶಸ್ವಿ ನಟಿ ಎನ್ನಿಸಿಕೊಂಡಿರುವ ಶ್ರದ್ಧಾ ಸಂಭಾವನೆ ಹೆಚ್ಚಳವಾಗಿರೋದ್ರಲ್ಲಿ ವಿಶೇಷವೇನಿಲ್ಲ. ಆದ್ರೆ ಪ್ರಭಾಸ್ ಜೊತೆ ನಟಿಸುತ್ತಿರುವುದೇ ಶ್ರದ್ಧಾಗೆ ದೊಡ್ಡ ವಿಷ್ಯ ಎಂದ್ರೆ ತಪ್ಪಾಗಲಾರದು. ಸಾಹೋ ಶೂಟಿಂಗ್ ಈ ತಿಂಗಳಿನಲ್ಲಿಯೇ ಶುರುವಾಗಲಿದೆ. ರಾಮೋಜಿ ರಾವ್ ಫಿಲ್ಮ್ ಸಿಟಿ ಜೊತೆಗೆ ಅಬುಧಾಬಿ ಹಾಗೂ ರೊಮೇನಿಯಾದಲ್ಲಿ ಶೂಟಿಂಗ್ ನಡೆಯಲಿದೆ. ಸಾಹೋ ಟೀಸರ್ ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಡಲಾಗಿದೆ.

150 ಕೋಟಿ ಬಜೆಟ್ ಚಿತ್ರ ಇದಾಗಿದ್ದು, ಹಿಂದಿ, ತಮಿಳು, ತೆಲಗು ಭಾಷೆಯಲ್ಲಿ ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...