alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯತಮೆಯೂ ಅಲ್ಲ, ಸ್ನೇಹಿತೆಯೂ ಅಲ್ಲ….

half

‘2 ಸ್ಟೇಟ್ಸ್’ ಚಿತ್ರ ಎರಡು ವಿಭಿನ್ನ ಸಂಸ್ಕೃತಿಗಳ ನಡುವಣ ಸಂಘರ್ಷದಲ್ಲೂ ಹುಟ್ಟಿದ ಪ್ರೇಮಕಥೆ. ಆದ್ರೆ ‘ಹಾಫ್ ಗರ್ಲ್ ಫ್ರೆಂಡ್’ ಸಿನೆಮಾ ವಿಭಿನ್ನವಾದ ಕಥಾಹಂದರವನ್ನು ಹೊಂದಿದೆ. ಪ್ರೇಮದ ಆರಂಭಿಕ ಹಂತ ಅಥವಾ ಪಕ್ವವಲ್ಲದ ಪ್ರೀತಿಯ ಕಥೆ ಇದು.

‘ಹಾಫ್ ಗರ್ಲ್ ಫ್ರೆಂಡ್’ ಚಿತ್ರದ ನಾಯಕಿ ಶ್ರದ್ಧಾ ಕಪೂರ್, ಸುಶಿಕ್ಷಿತ ಆಧುನಿಕ ಯುವತಿ. ನಾಯಕ ಅರ್ಜುನ್ ಕಪೂರ್ ಇಂಗ್ಲಿಷ್ ಬಾರದ ಮುಗ್ಧ ಹುಡುಗ. ಇವರಿಬ್ಬರ ನಡುವೆ ಇರೋದು ಪ್ರೀತಿಯೋ ಅಥವಾ ಸ್ನೇಹವೋ ಅನ್ನೋದೇ ‘ಹಾಫ್ ಗರ್ಲ್ ಫ್ರೆಂಡ್’ ಚಿತ್ರದ ಕುತೂಹಲಕಾರಿ ಸಂಗತಿ.

‘ಹಾಫ್ ಗರ್ಲ್ ಫ್ರೆಂಡ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಹಾಡುಗಳಂತೂ ಇಂಪಾಗಿವೆ. ಮೋಹಿತ್ ಸೂರಿ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಬಹುದು ಅನ್ನೋ ನಿರೀಕ್ಷೆಗಳು ಹೆಚ್ಚಿವೆ.

ಲೇಖಕ ಚೇತನ್ ಭಗತ್ ಅವರ ಪುಸ್ತಕ ಆಧಾರಿತ ಚಿತ್ರ ಇದಾಗಿದ್ದು, ಮೇ 19ಕ್ಕೆ ರಿಲೀಸ್ ಆಗಲಿದೆ. ಚೇತನ್ ಭಗತ್ ಅವರ ಕಾದಂಬರಿ ಆಧಾರಿತ ‘2 ಸ್ಟೇಟ್ಸ್’ ಚಿತ್ರ ಕೂಡ ಭರ್ಜರಿ ಹಿಟ್ ಆಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...