alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಂಚುರಿ ‘ಟಾಕೀಸ್’ನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ

maja takis

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ‘ಮಜಾ ಟಾಕೀಸ್’ ವೀಕ್ಷಕರ ಮನಸೂರೆಗೊಂಡಿದ್ದು, ಆರಂಭದಲ್ಲಿನ ಸಂಚಿಕೆಗಳಲ್ಲಿ ಹಿಂದಿಯ ‘ಕಾಮಿಡಿ ನೈಟ್ ವಿತ್ ಕಪಿಲ್’ ಛಾಯೆ ಕಂಡುಬಂದರೂ ಮೂರನೇ ಸಂಚಿಕೆಯಿಂದಲೇ ‘ಮಜಾಟಾಕೀಸ್’ ಮಜಾವೇ ಬೇರೆ ರೀತಿಯಲ್ಲಿತ್ತು.

ಸ್ವಂತಿಕೆಯಿಂದಲೇ ಕಮಾಲ್ ಮಾಡಿರುವ ಸೃಜನ್ ಲೋಕೇಶ್ ಅವರ ಹಾಸ್ಯಮಿಶ್ರಿತ ಶೈಲಿಯ ಮಾತುಗಳಿಗಂತೂ ವೀಕ್ಷಕರು ಫಿದಾ ಆಗಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾದ ‘ಮಜಾ ಟಾಕೀಸ್’ನಲ್ಲಿ ಬಹುತೇಕ ನಟರು ಕಾಣಿಸಿಕೊಂಡಿದ್ದಾರೆ. ಇದೀಗ 100ನೇ ಸಂಚಿಕೆಗೆ ಕಾಲಿಟ್ಟಿರುವುದರಿಂದ ಮಜಾಟಾಕೀಸ್ ತಂಡ ಸಂಭ್ರಮಾಚರಣೆಯಲ್ಲಿದೆ. ಇಂತಹ ಸಂಭ್ರಮದ ಕಾರ್ಯಕ್ರಮದಲ್ಲಿ ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾಗವಹಿಸಿರುವುದು ವಿಶೇಷವಾಗಿದೆ.

ಸೃಜನ್ ಲೋಕೇಶ್, ಇಂದ್ರಜಿತ್ ಲಂಕೇಶ್, ಮಂಡ್ಯ ರಮೇಶ್, ವಿ. ಮನೋಹರ್ ಸೇರಿದಂತೆ ಹಲವಾರು ಕಲಾವಿದರು ತಮ್ಮದೇ ಆದ ಶೈಲಿಯಿಂದಲೇ ನೋಡುಗರನ್ನು ಸೆಳೆದಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮ 100 ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...