alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿಯಿಂದಲೇ ಶುರುವಾಯ್ತು ‘ಕಬಾಲಿ’ ಅಬ್ಬರ

ranji-still 22

ಬೆಂಗಳೂರು: ಎಲ್ಲೆಲ್ಲೂ ರಜನಿಕಾಂತ್ ‘ಕಬಾಲಿ’ ಅಬ್ಬರ. ಭಾರತೀಯ ಸಿನಿಮಾರಂಗದಲ್ಲಿಯೇ ಸಿನಿಮಾ ಒಂದಕ್ಕೆ ಇಷ್ಟೊಂದು ಕ್ರೇಜ್ ಎಂದಿಗೂ ಸೃಷ್ಠಿಯಾಗಿರಲಿಲ್ಲ. ರಾತ್ರಿಯಿಂದಲೇ ಚಿತ್ರಮಂದಿಗಳತ್ತ ಮುಖ ಮಾಡಿದ್ದ ಜನ ‘ಕಬಾಲಿ’ ನೋಡಲು ಮುಗಿ ಬಿದ್ದಿದ್ದಾರೆ.

ವಿಶ್ವದಾದ್ಯಂತ ಸುಮಾರು 9000 ಸ್ಕ್ರೀನ್ ಗಳಲ್ಲಿ ‘ಕಬಾಲಿ’ ರಿಲೀಸ್ ಆಗಿದ್ದು, ರಾಜ್ಯದಲ್ಲಿಯೂ ಅತಿ ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಬೆಳಗಿನ ಜಾವ 4.15ಕ್ಕೆ ಶೋ ಆರಂಭವಾಗಿದೆ. ಬಾಲಾಜಿ ಚಿತ್ರಮಂದಿರದಲ್ಲಿ 3.30ಕ್ಕೆ ಮೊದಲ ಪ್ರದರ್ಶನ ಆರಂಭವಾಗಿದ್ದು, ಅದೇ ರೀತಿ ನಟರಾಜ ಟಾಕೀಸ್ ನಲ್ಲಿ 4 ಗಂಟೆಗೆ ಅಭಿಮಾನಿಗಳು ಚಿತ್ರ ವೀಕ್ಷಿಸಿದ್ದಾರೆ. ಶಾಸಕರಾದ ಎನ್.ಎ.ಹ್ಯಾರಿಸ್, ದೇವರಾಜ್ ಅವರೂ ಮೊದಲ ದಿನವೇ ಸಿನಿಮಾ ವೀಕ್ಷಿಸಿದ್ದಾರೆ.

ಬೆಂಗಳೂರು ಮಾತ್ರವಲ್ಲದೇ, ರಾಜ್ಯದ ಅನೇಕ ಕಡೆಗಳಲ್ಲಿ ‘ಕಬಾಲಿ’ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನ ಹೆಚ್ಚು ಶೋಗಳು ನಡೆಯುವ ಸಾಧ್ಯತೆ ಇದೆ. ಟಿಕೆಟ್ ಗಾಗಿ ಚಿತ್ರಮಂದಿರ ಬಳಿ ಜನ ಜಾತ್ರೆಯೇ ನೆರೆದಿದೆ. ಎಲ್ಲೆಲ್ಲೂ ರಜನಿಕಾಂತ್ ‘ಕಬಾಲಿ’ ಮೇನಿಯಾ ಶುರುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...