alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಕಾಂತ್ ಗೆ ‘ಎಂದಿರನ್’ ಶಂಕರ್ ವಾರ್ನಿಂಗ್ !

Robo-2-team-300x225

ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೇ, ಹಾಲಿವುಡ್ ಸಿನಿಮಾ ಮಂದಿಯೂ ತಿರುಗಿ ನೋಡುವಂತೆ ಮಾಡಿದ ‘ಎಂದಿರನ್'(ರೋಬೋ) ನಿರ್ದೇಶಕ ಶಂಕರ್ ಎರಡನೇ ಭಾಗದ ಚಿತ್ರೀಕರಣ ಆರಂಭಿಕ ಹಂತದಲ್ಲಿದ್ದು, ಈಗಾಗಲೇ ‘ಎಂದಿರನ್-2’ ಹವಾ ಕ್ರಿಯೇಟ್ ಆಗಿದೆ.

ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮೊದಲಾದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ‘ಎಂದಿರನ್’ ಸಿನಿಮಾ ರೀತಿಯಲ್ಲಿಯೇ ಎರಡನೇ ಭಾಗವೂ ಹಾಲಿವುಡ್ ರೇಂಜ್ ಮೇಕಿಂಗ್ ಹೊಂದಿರುತ್ತದೆ. ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿರುವ ಶಂಕರ್, ಚಿತ್ರ ತಂಡಕ್ಕೆ ಕಟ್ಟುನಿಟ್ಟಿನ ಷರತ್ತು ವಿಧಿಸಿದ್ದಾರೆ. ಯಾವುದೇ ಕಾರಣಕ್ಕೂ ಚಿತ್ರೀಕರಣ ಸ್ಥಳಕ್ಕೆ ಮೊಬೈಲ್ ಫೋನ್ ತರದಂತೆ ತಾಕೀತು ಮಾಡಿದ್ದಾರೆ.

ಅತಿಹೆಚ್ಚು ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಸಣ್ಣ ತುಣುಕು ಕೂಡ ಹೊರಗಡೆ ಸೋರಿಕೆಯಾಗಬಾರದೆಂದು ಶಂಕರ್ ಹೀಗೆ ಸೂಚನೆ ನೀಡಿದ್ದಾರೆ. ಚಿತ್ರತಂಡದ ರಜನಿಕಾಂತ್, ಅಕ್ಷಯ್ ಕುಮಾರ್ ಸೇರಿದಂತೆ ಕಲಾವಿದರು, ತಂತ್ರಜ್ಞರಿಗೆ ಕೂಡ ಚಿತ್ರೀಕರಣ ಸ್ಥಳಕ್ಕೆ ಮೊಬೈಲ್ ತರಬಾರದೆಂದು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...