alex Certify
ಕನ್ನಡ ದುನಿಯಾ       Mobile App
       

Kannada Duniya

ಶೋಲೆಯ ಈ ದೃಶ್ಯ ಚಿತ್ರೀಕರಣಕ್ಕೆ ಹಿಡಿತು 3 ವರ್ಷ…!

ಭಾರತ ಸಿನಿಮಾ ರಂಗದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ಶೋಲೆ ಚಿತ್ರ ತೆರೆಗೆ ಬಂದು ಇಂದಿಗೆ 43 ವರ್ಷ ಕಳೆದಿದೆ. 1975 ರಂದು ಇದೇ ದಿನ ತೆರೆಗೆ ಬಂದ ಶೋಲೆ ಚಿತ್ರವನ್ನು ಅಭಿಮಾನಿಗಳು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದಾರೆ. ಅತ್ಯುತ್ತಮ ಕಲಾವಿದರು, ನಟನೆ ಮತ್ತು ಸಂಭಾಷಣೆಯಿಂದಾಗಿ ಶೋಲೆ ಚಿತ್ರ 43 ವರ್ಷಗಳ ನಂತ್ರವೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ಕಲಾವಿದರಿಗೊಂದೇ ಅಲ್ಲ ನಿರ್ದೇಶಕರಿಗೂ ಹೆಸರು ತಂದುಕೊಟ್ಟ ಚಿತ್ರ ಶೋಲೆ. ಆ ಕಾಲದಲ್ಲಿ 2 ಕೋಟಿ ವೆಚ್ಚದಲ್ಲಿ ಅನೇಕ ವರ್ಷಗಳ ಶ್ರಮವೊಂದಿಗೆ ಚಿತ್ರ ಸಿದ್ಧವಾಗಿತ್ತು. ಚಿತ್ರದ ಒಂದು ದೃಶ್ಯದ ಚಿತ್ರೀಕರಣಕ್ಕೆ ಚಿತ್ರ ತಂಡ ಮೂರು ವರ್ಷಗಳನ್ನು ತೆಗೆದುಕೊಂಡಿದೆ.

ಪ್ರತಿ ಬಾರಿಯೂ ನಿರ್ದೇಶಕರಿಗೆ ತೃಪ್ತಿ ತರುವಂತೆ ದೃಶ್ಯ ಚಿತ್ರೀಕರಣವಾಗ್ತಿರಲಿಲ್ಲ. ಹಾಗಾಗಿ ಮೂರು ವರ್ಷಗಳ ಕಾಲ ಪ್ರಯತ್ನ ಪಡಲಾಯ್ತು. ಸಂಜೆ ವೇಳೆ ಜಯಾ ಬಚ್ಚನ್, ಪತಿ ನೆನಪು ಮಾಡಿಕೊಳ್ತಾ ದೀಪ ಆರಿಸ್ತಾರೆ. ಇತ್ತ ಬಚ್ಚನ್ ಮೌತ್ ಆರ್ಗನ್ ಬಾರಿಸ್ತಾರೆ. ಈ ದೃಶ್ಯಕ್ಕೆ ಸರಿಯಾಗಿ ಬೆಳಕು ಬರ್ತಿಲ್ಲ ಎನ್ನುವ ಕಾರಣಕ್ಕೆ ಮೂರು ವರ್ಷ ಚಿತ್ರೀಕರಣ ಮಾಡಲಾಯ್ತಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...