alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನೂ 2 ವಾರ ಮನೆಗೆ ಹೋಗುವಂತಿಲ್ಲ ದೀಪಿಕಾ…?

ಬುಧವಾರ ಜೂನ್ 13 ರಂದು ಮುಂಬೈನ ವರ್ಲಿಯಲ್ಲಿರುವ 33 ಮಹಡಿ ಕಟ್ಟಡ Beaumonde ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡದ 32ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 95ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದ ಅಗ್ನಿ ಶಾಮಕ ದಳ ಗುರುವಾರ ತನ್ನೆಲ್ಲ ಕೆಲಸ ಪೂರ್ಣಗೊಳಿಸಿದೆ.

ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಎಲ್ಲ ಕೆಲಸ ಮುಗಿಸಿದ ಅಗ್ನಿಶಾಮಕ ದಳ ಆಲ್ ಕ್ಲಿಯರ್ ಎಂದಿದೆ. ಕಾರ್ಯಾಚರಣೆ ವೇಳೆ ಯಾವುದೇ ಅಜ್ಞಾತ ವ್ಯಕ್ತಿಯನ್ನು ಕಟ್ಟಡದೊಳಗೆ ಬರಲು ಬಿಡಲಿಲ್ಲ. ಕಟ್ಟಡಕ್ಕೆ ಕರೆಂಟ್ ನೀಡುವ ಮೊದಲು BEST ಒಮ್ಮೆ ಪರಿಶೀಲನೆ ನಡೆಸುವ ನಿರ್ಧಾರಕ್ಕೆ ಬಂದಿದೆ.

ಅಗ್ನಿ ಶಾಮಕ ಸಿಬ್ಬಂದಿ ಕಟ್ಟಡದಿಂದ ಹೊರ ಬಂದ ಮೇಲೆ ನಮ್ಮ ಕೆಲಸ ಮುಗಿಯುತ್ತದೆ. ಆದ್ರೆ BEST ತನ್ನ ಕೆಲಸ ಶುರು ಮಾಡುತ್ತದೆ. ಕಟ್ಟಡಕ್ಕೆ ಯಾವಾಗ ವಿದ್ಯುತ್ ನೀಡಬೇಕು ಹಾಗೂ ಜನರ ವಾಸಕ್ಕೆ ಇದು ಯಾವಾಗ ಯೋಗ್ಯವಾಗಲಿದೆ ಎಂಬುದನ್ನು ಕಟ್ಟಡದ ಮಾಲೀಕರು ಸೇರಿ ನಿರ್ಧಾರ ಕೈಗೊಳ್ಳಲಿದ್ದಾರೆಂದು ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಹೇಳಿದ್ದಾರೆ.

ಸುಮಾರು 2 ವಾರಗಳ ಕಾಲ ಕಟ್ಟಡದಲ್ಲಿರುವ ಜನರು ಹೊರಗಿರಬೇಕಾಗುತ್ತದೆ. ಬಾಲಿವುಡ್ ನಟಿ ದೀಪಿಕಾ ಕೂಡ 26ನೇ ಅಂತಸ್ತಿನಲ್ಲಿ ವಾಸವಾಗಿದ್ದಾಳೆ. ಆಕೆ ಕೂಡ ಕುಟುಂಬ ಸಮೇತವಾಗಿ 10-15 ದಿನ ಬೇರೆಡೆ ಉಳಿಯಬೇಕಾಗುತ್ತದೆ. ದೀಪಿಕಾ ಎಲ್ಲಿ ಉಳಿಯುತ್ತಾಳೆನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...