alex Certify
ಕನ್ನಡ ದುನಿಯಾ       Mobile App
       

Kannada Duniya

ನೆಚ್ಚಿನ ನಟನನ್ನು ನೋಡಲು ಮಧ್ಯ ರಾತ್ರಿ ಮನೆ ಬಿಟ್ಟ ಹುಡುಗಿಯರು

tiger shroffತಮ್ಮ ನೆಚ್ಚಿನ ನಟ- ನಟಿಯನ್ನು ನೋಡಲು ಅಭಿಮಾನಿಗಳು ಹಂಬಲಿಸುವುದು ಸಹಜ. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕೆಂಬ ಬಯಕೆ ಎಲ್ಲರಲ್ಲೂ ಇರುತ್ತದೆ. ಆದರೆ ಈ ಇಬ್ಬರು ಹುಡುಗಿಯರು ಮಾತ್ರ ಅದಕ್ಕಾಗಿ ದುಸ್ಸಾಹಸವನ್ನೇ ಮಾಡಿದ್ದಾರೆ.

ಮಥುರಾ ಸಮೀಪದ ಕಾಮ್ನಿ ಗ್ರಾಮದ ಇಬ್ಬರು ಹುಡುಗಿಯರು ಸೋಮವಾರದಂದು ತಮ್ಮ ನೆಚ್ಚಿನ ನಟ ಟೈಗರ್ ಶ್ರಾಫ್ ಅವರ ‘ಭಾಗಿ’ ಚಿತ್ರವನ್ನು ನೋಡಿದ್ದಾರೆ. ಸಂಬಂಧದಲ್ಲಿ ಸಹೋದರಿಯರಾಗಿದ್ದ ಈ ಇಬ್ಬರೂ ಚಿತ್ರ ನೋಡಿ ಬರುತ್ತಿದ್ದಂತೆಯೇ ಟೈಗರ್ ಶ್ರಾಫ್ ರನ್ನು ಭೇಟಿ ಮಾಡಲೇಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ.

ಅದರಂತೆ ತಮ್ಮ ತಮ್ಮ ಮನೆಯಲ್ಲಿ ತಲಾ 1 ಸಾವಿರ ರೂ. ಹಣ ಕದ್ದು ಮಧ್ಯ ರಾತ್ರಿ ಮನೆ ಬಿಟ್ಟು ಮುಂಬೈಗೆ ಹೊರಟಿದ್ದಾರೆ. ಆದರೆ ಇವರಿಬ್ಬರನ್ನು ನೋಡಿ ಅನುಮಾನಗೊಂಡಿದ್ದ ಟೆಂಪೋ ಚಾಲಕನೊಬ್ಬ ಈ ಕುರಿತು ಮಾಹಿತಿ ನೀಡಿದ್ದಾನೆ. ಕೊನೆಗೂ ಇಬ್ಬರನ್ನೂ ಪತ್ತೆ ಹಚ್ಚಿದ ಪೊಲೀಸರು ವಿಚಾರಣೆ ನಡೆಸಿದ ವೇಳೆ ಟೈಗರ್ ಶ್ರಾಫ್ ಅವರನ್ನು ನೋಡಲು ಮುಂಬೈಗೆ ತೆರಳಲು ಹೊರಟಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...