alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಜಯ್ ಲೀಲಾ ಬನ್ಸಾಲಿಗೆ ಶಾಕ್ ನೀಡಿದ ಪ್ರಿಯಾಂಕ

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ವೈಯಕ್ತಿಕ ಹಾಗೂ ವೃತ್ತಿ ಎರಡೂ ವಿಚಾರಕ್ಕೆ ಚರ್ಚೆಯಾಗ್ತಿದ್ದಾಳೆ. ಸಲ್ಮಾನ್ ಖಾನ್ ‘ಭಾರತ್’ ಗೆ ಗುಡ್ ಬೈ ಹೇಳಿದ್ದ ಪ್ರಿಯಾಂಕ ಬಾಲಿವುಡ್ ನ ಇನ್ನೊಂದು ದೊಡ್ಡ ಪ್ರಾಜೆಕ್ಟ್ ಗೆ ಬೈ ಬೈ ಹೇಳಿದ್ದಾಳೆ ಎನ್ನಲಾಗ್ತಿದೆ.

ಯಸ್, ಪ್ರಿಯಾಂಕ ಚೋಪ್ರಾ ಸಂಜಯ್ ಲೀಲಾ ಬನ್ಸಾಲಿ ಗ್ಯಾಂಗ್ ಸ್ಟಾರ್ ಗಂಗುಭಾಯ್ ಕೋಥೆಲಿ ಚಿತ್ರವನ್ನು ಕೈಬಿಟ್ಟಿದ್ದಾಳಂತೆ. ಒಂದು ತಿಂಗಳ ಹಿಂದೆ ಪ್ರಿಯಾಂಕ, ಸಂಜಯ್ ಲೀಲಾ ಬನ್ಸಾಲಿ ಗ್ಯಾಂಗ್ ಸ್ಟಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆಂಬ ಸುದ್ದಿಯಿತ್ತು. ಭಾರತ್ ದಂತೆ ಪ್ರಿಯಾಂಕ ಈ ಚಿತ್ರಕ್ಕೂ ಕೊನೆ ಹಂತದಲ್ಲಿ ಗುಡ್ ಬೈ ಹೇಳಿದ್ದಾಳೆಂಬ ಸುದ್ದಿಯಿದೆ.

ಪ್ರಿಯಾಂಕ ಈ ನಿರ್ಧಾರ ಬನ್ಸಾಲಿ ನಿರಾಸೆಗೆ ಕಾರಣವಾಗಿದೆ. ಚಿತ್ರವನ್ನೇ ಬನ್ಸಾಲಿ ಕೈಬಿಟ್ಟಿದ್ದಾರೆ ಎನ್ನಲಾಗ್ತಿದೆ. ಪ್ರಿಯಾಂಕ ಭಾರತ್ ಹಾಗೂ ಗ್ಯಾಂಗ್ ಸ್ಟಾರ್ ಚಿತ್ರವನ್ನು ಹಾಲಿವುಡ್ ನ Cowboy Ninja Viking ಚಿತ್ರಕ್ಕಾಗಿ ಕೈ ಬಿಟ್ಟಿದ್ದಾಳೆ ಎನ್ನಲಾಗ್ತಿದೆ. ಅನೇಕ ವರ್ಷಗಳ ನಂತ್ರ ಭಾರತ್ ಮೂಲಕ ಬಾಲಿವುಡ್ ಗೆ ಪಿಗ್ಗಿ ಬರ್ತಾಳೆಂಬ ಸುದ್ದಿಯಿತ್ತು. ಭಾರತ್ ಬಿಟ್ಟಿರುವ ಪ್ರಿಯಾಂಕ ದಿ ಸ್ಕೈ ಈಸ್ ಪಿಂಕ್ ಚಿತ್ರದಲ್ಲಿ ಮಾತ್ರ ನಟಿಸಲಿದ್ದಾಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...