alex Certify
ಕನ್ನಡ ದುನಿಯಾ       Mobile App
       

Kannada Duniya

6ನೇ ವಯಸ್ಸಿನಲ್ಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಳಂತೆ ನಟಿ

ಸಾಮಾಜಿಕ ಜಾಲತಾಣದಲ್ಲಿ ಮಿಟೂ ಕ್ಯಾಂಪೇನ್ ನಡೆಯುತ್ತಿದೆ. ಮಹಿಳೆಯರು ತಮ್ಮ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗವಾಗಿ ಮಾತನಾಡ್ತಿದ್ದಾರೆ. ಹಾಲಿವುಡ್ ನಲ್ಲಿ ತುಂಬಾ ಪ್ರಸಿದ್ಧಿ ಪಡೆದ ಈ ಕ್ಯಾಂಪೇನ್ ಬಾಲಿವುಡ್ ಹಾಗೂ ಟಿವಿ ಮಾಧ್ಯಮಕ್ಕೂ ಕಾಲಿಟ್ಟಿದೆ. ನಟಿಯರು ತಮ್ಮ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಳ್ತಿದ್ದಾರೆ.

ಧಾರಾವಾಹಿ ಇಷ್ಕಬಾಜಾ ನಟಿ ಗೌರಿ ಅಂದ್ರೆ ಶ್ರೇನು ಪಾರಿಕ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿ ನಟಿ ಹಂಚಿಕೊಂಡ ವಿಷ್ಯ ದಂಗಾಗಿಸುವಂತಿದೆ. ಆರನೇ ವಯಸ್ಸಿನಲ್ಲಿಯೇ ನಟಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಳಂತೆ.

ಸ್ಥಳೀಯ ಬಸ್ ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್ ನಲ್ಲಿ ವ್ಯಕ್ತಿಯೊಬ್ಬನ ಕಾಲಿನ ಮೇಲೆ ಶ್ರೇನು ಕುಳಿತಿದ್ದಳಂತೆ. ಆತ ಆಕೆಯನ್ನು ತಪ್ಪಾಗಿ ಸ್ಪರ್ಶಿಸಿದ್ದಾನಂತೆ. ಅದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಕೆಟ್ಟ ಸ್ವಪ್ನದಂತೆ ಅದು ಕಾಡುತ್ತದೆ ಎನ್ನುತ್ತಾಳೆ ನಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...